ಜಾಗತಿಕ ಹಣಕಾಸು ಪ್ರಕ್ಷುಬ್ಧತೆ ಮತ್ತು ಅನೇಕ ಬ್ಯಾಂಕ್‌ಗಳಲ್ಲಿನ ನಷ್ಟದಿಂದಾಗಿ ಮೂಲೆಗುಂಪಾಗಿದ್ದ ಅಂಚೆ ಕಚೇರಿಗಳು ಈ ಮತ್ತೆ ಬೆಳಕಿಗೆ ಬರುತ್ತಿದೆ.
ದಲಾಲ್ ಸ್ಟ್ರೀಟ್‌ನಲ್ಲಿ ನಷ್ಟಕ್ಕೊಳಗಾದ ಹೂಡಿಕೆದಾರರು ತಮ್ಮ ಹಣವನ್ನು ಹೂಡಿಕೆ ಮಾಡಲು ಈಗ ಅಂಚೆ ಕಚೇರಿಗಳತ್ತ ದೃಷ್ಟಿ ಹಾಯಿಸುತ್ತಿದ್ದಾರೆ.
ಹೆಚ್ಚಿನ ಮಂದಿ ತಮ್ಮ ಹಣವನ್ನು ಅಂಚೆ ಕಚೇರಿ ಠೇವಣಿ ಖಾತೆಯಲ್ಲಿ ಇಡಲು ಬಯಸುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಅಂಚೆ ಕಚೇರಿ ಉಳಿತಾಯ ಖಾತೆಯ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿದೆ ಎಂದು ಹೈದರಾಬಾದ್ ಪ್ರಧಾನ ಅಂಚೆಕಚೇರಿಯ ಕಿರು ಉಳಿತಾಯ ಖಾತೆಯ ಏಜೆಂಟ್ ಒಬ್ಬರು ಹೇಳುತ್ತಾರೆ.
ಸಾಮಾನ್ಯವಾಗಿ ಪ್ರತಿ ತಿಂಗಳು ನಾಲ್ಕರಿಂದ ಐದು ನೂತರ ಠೇವಣಿದಾರರನ್ನಷ್ಟೇ ನನಗೆ ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಲ್ಲಿ ಪ್ರತಿ ತಿಂಗಳು ಸುಮಾರು 15ರಷ್ಟು ಏರಿಕೆಗೊಂಡಿದೆ. ಹೆಚ್ಚಿನ ಮಂದಿ ಈಗ ಅಂಚೆ ಕಚೇರಿ ಉಳಿತಾಯ ಖಾತೆಯನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಏಜೆಂಟ್ ಸತೀಶ್ ಕುಮಾರ್ ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ 75 ವರ್ಷದ ಮುಮ್ತಾಜ್ ಖಾನ್ ಹೈದರಾಬಾದ್ ಅಂಚೆಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ತನ್ನ ಮಾಸಿಕ ಆದಾಯ ಯೋಜನೆಯ ಮೂಲಕ ಪ್ರತಿ ತಿಂಗಳು ಬಡ್ಡಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ತಾನು ಶೇರು ಮಾರುಕಟ್ಟೆಯಲ್ಲಿ ಹಣ ಹೂಡದೇ ಇದ್ದುದರಿಂದ ತಾನು ನಿರಾತಂಕರಾಗಿರುವುದಾಗಿ ಮಮ್ತಾಜ್ ಹೇಳುತ್ತಾರೆ. |