ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ: ಶೇ.10.68ಕ್ಕೆ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ: ಶೇ.10.68ಕ್ಕೆ ಇಳಿಕೆ
PTI
ಆರ್ಥಿಕ ಕುಸಿತದ ಭೀತಿಯ ನಡುವೆಯೂ, ಅಕ್ಟೋಬರ್ 18ಕ್ಕೆ ಅಂತ್ಯಗೊಂಡ ವಾರದಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.10.68ಕ್ಕೆ ಇಳಿಕೆಗೊಂಡಿದ್ದು, ಇದರಿಂದಾಗಿ ಹಣದುಬ್ಬರ ಕುರಿತಂತೆ ಕೇಂದ್ರ ಸರಕಾರದ ಸಮಸ್ಯೆಯು ಕೊಂಚ ನಿರಾಳವಾದಂತಾಗಿದೆ. ಕಳೆದ ವಾರ ಹಣದುಬ್ಬರದ ಪ್ರಮಾಣವು ಶೇ.11.07ರಷ್ಟಿತ್ತು.

ಹಣ್ಣುಗಳು, ಬೇಳೆ-ಕಾಳುಗಳು, ಸಾಂಬಾರ ಪದಾರ್ಥ ಮತ್ತು ಉತ್ಪಾದನಾ ವಸ್ತುಗಳ ಸಗಟು ಬೆಲೆಯಲ್ಲಿ ಇಳಿಕೆ ಉಂಟಾದ ಪರಿಣಾವಾಗಿ ಹಣದುಬ್ಬರವು ಶೇ.0.39ರಷ್ಟು ತಗ್ಗಿದೆ.

ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದಿಂದ ಬಿಡುಗಡೆ ಮಾಡಲ್ಪಟ್ಟ ಸಗಟು ಬೆಲೆ ಅಂಕಿಅಂಶಗಳು, ಪ್ರಾಥಮಿಕ ಉತ್ಪನ್ನಗಳಾದ ರಬ್ಬರ್, ಕಡಲೆ ಬೀಜ ಮುಂತಾದ ಉತ್ಪನ್ನಗಳಲ್ಲಿ ಇಳಿಕೆ ಉಂಟಾಗಿರುವುದನ್ನು ಸೂಚಿಸಿವೆ.

ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಹಣದುಬ್ಬರವು ಶೇ.12.91ಕ್ಕೆ ಏರಿಕೆಗೊಂಡಿತ್ತು. ಜೂನ್ ತಿಂಗಳಲ್ಲಿ ಸರಕಾರವು ರಖಂ ಇಂಧನ ಬೆಲೆಯನ್ನು ಏರಿಕೆಗೊಳಿಸಿದ ನಂತರ ಹಣದುಬ್ಬರವು ಎರಡಂಕಿಗೆ ತಲುಪಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೊಬೈಲ್ ಗೇಮ್‌‌ಗೆ ಆರ್ಥಿಕ ಬಿಕ್ಕಟ್ಟು ಹೊಡೆತ
ಶೇರುಪೇಟೆ ಕುಸಿತ: ಬೇಡಿಕೆಯತ್ತ ಅಂಚೆ ಕಚೇರಿ
ಭಾರತೀಯ ಸಂಸ್ಥೆಗಳಿಂದ ಶೇ.25ರಷ್ಟು ಉದ್ಯೋಗ ಕಡಿತ
ತೈಲ ಬೆಲೆ ಇಳಿಕೆಯಿಲ್ಲ: ಸರಕಾರ ಸ್ಪಷ್ಟನೆ
ಆರ್‌ಬಿಐ, ಸೆಬಿಯೊಂದಿಗೆ ಚಿದಂಬರಂ ಮಾತುಕತೆ
ಆಂಧ್ರಬ್ಯಾಂಕ್‌ ಜತೆ ಹೀರೋಹೋಂಡಾ ಒಪ್ಪಂದ