ಸರಕಾರದ ನೂತನ ಸಲಹಾಸೂತ್ರವೊಂದು ಟೆಲಿವಿಶನ್ ಕಂಟೆಂಟ್‌ಗಳನ್ನು ನಿಯಂತ್ರಿಸಲಿದೆ ಎಂದು ಪ್ರಸರಣ ಸಚಿವಾಲಯದ ಮೂಲಗಳು ತಿಳಿಸಿವೆ.
ಟಿವಿ ಕಂಟೆಂಟ್ ಗುಣಮಟ್ಟವು ಕುಸಿತಗೊಳ್ಳುತ್ತಿರುವ ಸಂಬಂಧ ನ್ಯಾಯಾಲಯವು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸರಣ ಸಚಿವಾಲಯವು ಟೆಲಿವಿಶನ್ ಕಂಟೆಂಟ್ ಕೋಡ್ ವಿಮರ್ಷಿಸಲು ಮುಂದಾಗಿದೆ.
ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಿರುವುದರಿಂದ ಟೆಲಿವಿಶನ್ ಕಂಟೆಂಟ್ ನಿಯಂತ್ರಣಕ್ಕೆ ನೂತನ ಸಲಹಾಸೂತ್ರವನ್ನು ಸಿದ್ಧಪಡಿಸಲೇಬೇಕಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಮಾಹಿತಿ ಮತ್ತು ಪ್ರಸರಣ ವಿಭಾಗದ ರಾಜ್ಯ ಸಚಿವ ಆನಂದ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
ಟೆಲಿವಿಶನ್ ಕಂಟೆಂಟ್ ಸೌಜನ್ಯದ ಬಗ್ಗೆ ಕ್ರಮ ಕೈಗೊಳ್ಳುವಂತೆ 15 ದಿನಗಳ ಹಿಂದೆ ನ್ಯಾಯಾಲಯವು ಸರಕಾರಕ್ಕೆ ಸೂಚನೆ ನೀಡಿತ್ತು. ಇದಕ್ಕಿಂತಲೂ ಮೊದಲು ಕಳಪೆ ಗುಣಮಟ್ಟದ ಕಂಟೆಂಟ್ ಒದಗಿಸುವ ಕುರಿತಾಗಿ ಸರಕಾರವನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ನ್ಯಾಯಾಲಯದ ಈ ಸೂಚನೆಯಿಂದಾಗಿ ಟೆಲಿವಿಶನ್‌ಗೆ ಕಂಟೆಂಟ್ ಕೋಡ್ ಆವಶ್ಯಕತೆ ಇರುವ ಬಗ್ಗೆ ಸಚಿವಾಲಯದಲ್ಲಿ ಒಮ್ಮತ ಮೂಡಿತ್ತು. |