ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಆರ್‌ಬಿಐ ಕ್ರಮಗಳಿಂದ ಸೂಕ್ತ ಪ್ರಯೋಜನವಿಲ್ಲ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಆರ್‌ಬಿಐ ಕ್ರಮಗಳಿಂದ ಸೂಕ್ತ ಪ್ರಯೋಜನವಿಲ್ಲ'
MOKSHA
ಅಗತ್ಯವಿದ್ದಲ್ಲಿ ಬ್ಯಾಂಕ್‌ಗಳಿಗೆ ನಗದು ಹರಿವನ್ನು ತುಂಬಲಾಗುವುಗು ಎಂದು ಹೇಳುವ ಮೂಲಕ ಅಕ್ಟೋಬರ್ 24ರಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮಧ್ಯಾವಧಿ ಸಾಲ ನೀತಿ ಘೋಷಣೆಯ ವೇಳೆ ಎಲ್ಲಾ ಪ್ರಮುಖ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಅಲ್ಲದೆ, ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗಾಗಿ ಆರ್‌ಬಿಐ 1,45,000 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಿತ್ತು. ಜೊತೆಗೆ ನಗದು ಮೀಸಲು ಅನುಪಾತವನ್ನು ಶೇ.2.5ರಷ್ಟು ಇಳಿಕೆಗೊಳಿಸಿತ್ತು.

ಕೇಂದ್ರ ಸರಕಾರದ ಮನವಿಯ ಮೇರೆಗೆ ರೈತರ ಸಾಲಮನ್ನಾ ಯೋಜನೆಗಾಗಿ ಬ್ಯಾಂಕ್‌ಗಳಿಗೆ 25000 ಕೋಟಿ ರೂ.ಯನ್ನೂ ನೀಡಿತ್ತು. ಇದರೊಂದಿಗೆ, ಸಾಲ ಒತ್ತಡವನ್ನು ಎದುರಿಸುವ ನಿಟ್ಟಿನಲ್ಲಿ ಮ್ಯೂಚುವಲ್ ಫಂಡ್‌ಗಾಗಿ 20,000 ಕೋಟಿ ರೂ.ಯನ್ನು ಬ್ಯಾಂಕ್‌ಗಳಿಗೆ ಒದಗಿಸಿತ್ತು.

ಆರನೇ ವೇತನಾ ಆಯೋಗದ ವೇತನ ಹೆಚ್ಚಳದ ಅನುಸಾರ ಬಾಕಿ ಮೊತ್ತಕ್ಕಾಗಿ ಸರಕಾರವು 15,000 ಕೋಟಿ ರೂ.ಯನ್ನು ಬಿಡುಗಡೆ ಮಾಡಿತ್ತು ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.

ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್‌ಗಳನ್ನು ಮಾರಾಟ ಮಾಡುವುದರಿಂದ ಆರ್‌ಬಿಐ ಕೈಗೊಳ್ಳುವ ಕ್ರಮಗಳು ಯಾವುದೇ ಪರಿಣಾಮವನ್ನು ಬೀರುತ್ತಿಲ್ಲ ಅಲ್ಲದೆ, ಎಫ್ಐಐಗಳು ತಮ್ಮ ದೇಶಗಳಿಗೆ ಹಣವನ್ನು ಮರಳಿಸಲು ಡಾಲರ್ ಖರೀದಿಸುವುದರಿಂದ ಡಾಲರ್ ಬೇಡಿಕೆಯು ಗಮನಾರ್ಹ ಏರಿಕೆಗೊಂಡಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ.

ಇದಲ್ಲದೆ, ರಫ್ತು ಮೊತ್ತಕ್ಕಿಂತ ಆಮದು ಮೊತ್ತದಲ್ಲಿ ಹೆಚ್ಚಳ ಉಂಟಾಗಿದೆ. ಇದು ಕೂಡಾ ಮಾರುಕಟ್ಟೆಯಲ್ಲಿ ಡಾಲರ್ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದೂವರೆ ತಿಂಗಳುಗಳಿಂದ ರೂಪಾಯಿಯು ಶೇ.12ರಷ್ಟು ಇಳಿಕೆಗೊಂಡಿದೆ.

ಡಾಲರ್ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿದಿನ ಒಂದರಿಂದ ಎರಡು ಶತಕೋಟಿ ಡಾಲರ್ ಮಾರಾಟ ಮಾಡುತ್ತಿದ್ದು, ಈ ಪ್ರಕ್ರಿಯೆಯು ನಗದು ಹರಿವನ್ನು 10,000 ಕೋಟಿಯಿಂದ 5000 ಕೋಟಿಗೆ ತಗ್ಗಿಸಿದೆ .ಆದ್ದರಿಂದಲೇ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಕ್ರಮಗಳು ಯಾವುದೇ ಪ್ರಯೋಜನವನ್ನು ಉಂಟುಮಾಡುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಿವಿ ಕಂಟೆಂಟ್‌ಗೆ ಸರಕಾರದಿಂದ ನೂತನ ಕೋಡ್
ಹಣದುಬ್ಬರ: ಶೇ.10.68ಕ್ಕೆ ಇಳಿಕೆ
ಮೊಬೈಲ್ ಗೇಮ್‌‌ಗೆ ಆರ್ಥಿಕ ಬಿಕ್ಕಟ್ಟು ಹೊಡೆತ
ಶೇರುಪೇಟೆ ಕುಸಿತ: ಬೇಡಿಕೆಯತ್ತ ಅಂಚೆ ಕಚೇರಿ
ಭಾರತೀಯ ಸಂಸ್ಥೆಗಳಿಂದ ಶೇ.25ರಷ್ಟು ಉದ್ಯೋಗ ಕಡಿತ
ತೈಲ ಬೆಲೆ ಇಳಿಕೆಯಿಲ್ಲ: ಸರಕಾರ ಸ್ಪಷ್ಟನೆ