ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಿಗ್‌ ಟಿ.ವಿ ಸಂಪರ್ಕ ಕೇವಲ 700 ರೂ.ಮಾತ್ರ.
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಗ್‌ ಟಿ.ವಿ ಸಂಪರ್ಕ ಕೇವಲ 700 ರೂ.ಮಾತ್ರ.
ಭಾರತದ ಪ್ರಪ್ರಥಮ ಮತ್ತು ಜಗತ್ತಿನಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯ ಡಿಟಿಎಚ್‌ ಸೇವೆಯನ್ನು ಹೊಂದಿದ್ದು, ಟೆಲಿವಿಜನ್ ತಯಾರಿಕೆ ಸಂಸ್ಥೆಯಾದ ಎಲ್‌ಜಿ ಎಲೆಕ್ಟ್ರಾನಿಕ್ಸ್‌ನೊಂದಿಗಿನ ವಿಶೇಷ ಒಪ್ಪಂದದ ಹಿನ್ನೆಲೆಯಲ್ಲಿ ಮೂರು ತಿಂಗಳ ಚಂದಾದೊಂದಿಗೆ ನೂತನ ಸಂಪರ್ಕ ಕೇವಲ 700 ರೂಪಾಯಿಗಳಿಗೆ ಲಭ್ಯ ಎಂದು ಕಂಪೆನಿ ಪ್ರಕಟಿಸಿದೆ.

ಎಲ್‌ಜಿ ಎಲೆಕ್ಟ್ರಾನಿಕ್ಸ್ ಟೆಲಿವಿಜನ್ ಸೆಟ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಮೂರು ತಿಂಗಳ ಚಂದಾ ಪಾವತಿಯೊಂದಿಗೆ ಬಿಗ್‌ಟಿ.ವಿ ಲೈಟ್ ಪ್ಯಾಕ್‌( 61 ಚಾನೆಲ್‌+1ಪ್ರಾದೇಶಿಕ ಚಾನೆಲ್‌, ದಕ್ಷಿಣ ರಾಜ್ಯಗಳನ್ನು ಹೊರತುಪಡಿಸಿ) ಮತ್ತು ಬಿಗ್‌ಟಿ.ವಿ ಸೌಥ್ ಡಿಲೈಟ್ ಪ್ಯಾಕ್( 99ಚಾನೆಲ್‌ಗಳು +1 ಪ್ರಾದೇಶಿಕ ಚಾನೆಲ್, ದಕ್ಷಿಣ ರಾಜ್ಯಗಳಿಗೆ ಮಾತ್ರ) ಕೇವಲ 700 ರೂಪಾಯಿಗಳಲ್ಲಿ ಮಾತ್ರ ಸಂಪರ್ಕ ಲಭ್ಯವಿದೆ. ಎಲ್‌ಜಿ ಎಲೆಕ್ಟ್ರಾನಿಕ್ಸ್ ಟೆಲಿವಿಜನ್ ಸೆಟ್‌ಗಳಲ್ಲಿ 14 ಮಾದರಿಗಳಿದ್ದು ಆಯ್ಕೆಗೆ ಅವಕಾಶಗಳಿವೆ.

ಸೌಥ್ ಡಿಲೈಟ್ ಪ್ಯಾಕ್‌ನಲ್ಲಿ ಸ್ಟಾರ್‌ಪ್ಲಸ್, ಸೋನಿ, ಸ್ಟಾರ್‌ಗೋಲ್ಡ್, ಡಿಸ್ಕವರಿ, ಸ್ಟಾರ್ ಮೂವೀಸ್, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಹೆಡ್‌ಲೈನ್ಸ್ ಟುಡೆ, ಟೈಮ್ಸ್ ನೌ, ಸ್ಟಾರ್ ನ್ಯೂಸ್, ಐಬಿಎನ್,ಸಿಎನ್‌ಬಿಸಿ,ಸಿಎನ್‌ಎನ್ ಐಬಿಎನ್, ಮಲೆಯಾಳಂ ಭಾಷೆಯ ಚಾನೆಲ್‌ಗಳಾದ ಮನೋರಮಾ ನ್ಯೂಸ್, ಅಮೃತಾ ಟಿ.ವಿ,ಏಷ್ಯಾನೆಟ್‌ ನ್ಯೂಸ್,ಏಷ್ಯಾನೆಟ್‌ ಪ್ಲಸ್, ಡಿಡಿ 4,ಮಲೆಯಾಳಂ ಸೂರ್ಯ ಟಿ.ವಿ, ಮಕ್ಕಳ ಚಾನೆಲ್‌ಗಳಾದ ಡಿಸ್ನಿ ಚಾನೆಲ್, ಜೆಟಿಕ್ಸ್, ನಿಕೆಲ್‌ಡೊ1ನ್,ಕ್ರೀಡಾ ಚಾನೆಲ್‌ಗಳಾದ ಟೆನ್‌ಸ್ಪೋರ್ಟ್ಸ್ , ಡಿಡಿ ಸ್ಪೋರ್ಟ್ಸ್ ಮತ್ತಿತರ ಪ್ರಾದೇಶಿಕ ಭಾಷೆಗಳ ಚಾನೆಲ್‌ಗಳ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ.

ಬಿಗ್‌ಟಿ.ವಿ ಯಲ್ಲಿ ಪ್ರಾದೇಶಿಕ ಪ್ಯಾಕ್‌ಗಳು ಕೂಡಾ 30 ರೂಪಾಯಿಗಳನ್ನು ಪಾವತಿಸಿ ಪಡೆಯಬಹುದಾಗಿದೆ.ಟಾಪ್‌-ಅಪ್ ಪ್ಯಾಕ್‌ಗಳಾದ ನ್ಯೂಸ್‌ ಪ್ಲಸ್ , ಇಂಗ್ಲೀಷ್ ಮೂವಿ ಪ್ಲಸ್, ಹಿಂದಿ ಮೂವಿ ಪ್ಲಸ್, ಕಿಡ್ಸ್ ಮೂವಿ ಪ್ಲಸ್, ಸ್ಪೋರ್ಟ್ಸ್ ಪ್ಲಸ್ ಮತ್ತು ಎಲೈಟ್‌ ಪ್ಲಸ್‌ ಚಾನೆಲ್‌ಗಳನ್ನು 25ರಿಂದ 40 ರೂ.ಗಳಲ್ಲಿ ಲಭ್ಯವಿದೆ ಎಂದು ಬಿಗ್ ಟಿ.ವಿ ತಿಳಿಸಿದೆ.

ಅಗಸ್ಟ್ 19 ರಂದು ದೇಶದಲ್ಲಿ ಅತಿ ವೇಗವಾಗಿ ಡಿಟಿಎಚ್‌ ಸೇವೆಯನ್ನು ನೀಡುವ ಬಿಗ್‌ಟಿ.ವಿ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಕೇವಲ 50 ದಿನಗಳ ಅವಧಿಯಲ್ಲಿ 5 ಲಕ್ಷ ಚಂದದಾರರಾಗಿದ್ದು ಪ್ರತಿದಿನ 10 ಸಾವಿರ ಚಂದದಾರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಬಿಗ್‌ಟಿ.ವಿ ಅಧ್ಯಕ್ಷ ಅರುಣ್ ಕಪೂರ್‌ ಮಾತನಾಡಿ ,ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಬಿಗ್‌ಟಿ.ವಿಗೆ ವಿಶೇಷ ಸ್ಥಾನವಿರುವುದರಿಂದ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಉನ್ನತ ಮಟ್ಟದ ಉತ್ಪಾದನೆ,ಗುಣಮಟ್ಟದ ಸೇವೆ, ಡಿಜಿಟಲ್ ಚಿತ್ರಗಳು ಹಾಗೂ ಸೌಂಡ್‌ಎಫೆಕ್ಟ್ ಅಧುನಿಕ ಎಂಪಿಇಜಿ 4 ತಂತ್ರಜ್ಞಾನ ಮತ್ತು ರಿಲಯನ್ಸ್‌ನ ಬಲಯುತ ಮೂಲಸೌಕರ್ಯಗಳು ಬೆನ್ನೆಲುಬಾಗಿ ನಿಂತಿವೆ. ದಕ್ಷಿಣ ಭಾರತದ ಗ್ರಾಹಕರ ನಿರೀಕ್ಷೆಯ ಗುರಿಯನ್ನು ತಲುಪಲು ಕಠಿಣವಾಗಿ ಶ್ರಮಿಸಲಾಗುವುದು ಎಂದು ಹೇಳಿದ್ದಾರೆ.

ಡಿಟಿಎಚ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಿಗ್‌ಟಿ.ವಿ 1490 ರೂ.ಗಳ ಮೂಲ ದರದಲ್ಲಿ 3 ತಿಂಗಳ ಮುಕ್ತ ಚಂದದಾರ ಪಾವತಿಯೊಂದಿಗೆ ಪ್ರಸ್ತುತವಿರುವ ಹಬ್ಬಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿರುವ ಇನ್ನಿತರ ಡಿಟಿಎಚ್‌ಗಳಿಗಿಂತ ಶೇ.33ರಷ್ಟು ಹೆಚ್ಚಿನ ಚಾನೆಲ್‌ಗಳನ್ನು ನೀಡಲಾಗುತ್ತಿದೆ ಎಂದು ಕಪೂರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಆರ್‌ಬಿಐ ಕ್ರಮಗಳಿಂದ ಸೂಕ್ತ ಪ್ರಯೋಜನವಿಲ್ಲ'
ಟಿವಿ ಕಂಟೆಂಟ್‌ಗೆ ಸರಕಾರದಿಂದ ನೂತನ ಕೋಡ್
ಹಣದುಬ್ಬರ: ಶೇ.10.68ಕ್ಕೆ ಇಳಿಕೆ
ಮೊಬೈಲ್ ಗೇಮ್‌‌ಗೆ ಆರ್ಥಿಕ ಬಿಕ್ಕಟ್ಟು ಹೊಡೆತ
ಶೇರುಪೇಟೆ ಕುಸಿತ: ಬೇಡಿಕೆಯತ್ತ ಅಂಚೆ ಕಚೇರಿ
ಭಾರತೀಯ ಸಂಸ್ಥೆಗಳಿಂದ ಶೇ.25ರಷ್ಟು ಉದ್ಯೋಗ ಕಡಿತ