ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಸೋಚಾಂ ವರದಿಗೆ ಸರಕಾರ ಆಕ್ರೋಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸೋಚಾಂ ವರದಿಗೆ ಸರಕಾರ ಆಕ್ರೋಶ
ಭಾರತೀಯ ಕಂಪನಿಗಳಲ್ಲಿನ ಉದ್ಯೋಗ ಕಡಿತದ ಕುರಿತಂತೆ ಉದ್ಯಮ ಮಂಡಳಿ ಅಸೋಚಾಂ ನೀಡಿರುವ ವರದಿಗಳ ವಿರುದ್ಧ ಸರಕಾರವು ತೀವ್ರ ಆಕ್ರೋಶಗೊಂಡಿದ್ದು, ಈ ಹೇಳಿಕೆಗಳು ಬೇಜಾವಾಬ್ಧಾರಿಯುಕ್ತ ಮತ್ತು ಅಸಂಬದ್ಧ ಎಂದು ಹೇಳಿದೆ.

ಇದೊಂದು ಬೇಜವಾಬ್ಧಾರಿಯುತ ಹೇಳಿಕೆಯಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯದ ರಾಜ್ಯ ಸಚಿವ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಭಾರತೀಯ ಕಂಪನಿಗಳು, ಐಟಿ, ವಿಮಾನಯಾನ, ಸ್ಟೀಲ್, ಹಣಕಾಸು ಸೇವೆ, ಸ್ಥಿರಾಸ್ತಿ, ಸಿಮೆಂಟ್ ಮುಂತಾದ ಕ್ಷೇತ್ರಗಳಲ್ಲಿ ಶೇ.25-30ರಷ್ಟು ನೌಕರರಿಗೆ ಪಿಂಕ್ ಸ್ಲಿಪ್ ನೀಡಲು ಸಿದ್ಧವಾಗಿದೆ ಎಂಬುದಾಗಿ ಉದ್ಯಮ ಮಂಡಳಿ ಅಸೋಚಾಂ ಬುಧವಾರ ವರದಿ ನೀಡಿತ್ತು.

ಕೈಗಾರಿಕಾ ಸಂಸ್ಥೆಗಳು ಇಂತಹ ಆತಂಕಕಾರಿ ವರದಿಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಜೈರಾಂ ಒತ್ತಾಯಿಸಿದ್ದಾರೆ.

ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೂ ಅಸೋಚಾಂನ ಈ ಹೇಳಿಕೆಯನ್ನು ವಿರೋಧಿಸಿದ್ದು, ಇದು ಹೆಚ್ಚುವರಿ ಉದ್ಯೋಗ ನಿರ್ಮಾಣದ ಮೇಲೆ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಗ್‌ ಟಿ.ವಿ ಸಂಪರ್ಕ ಕೇವಲ 700 ರೂ.ಮಾತ್ರ.
'ಆರ್‌ಬಿಐ ಕ್ರಮಗಳಿಂದ ಸೂಕ್ತ ಪ್ರಯೋಜನವಿಲ್ಲ'
ಟಿವಿ ಕಂಟೆಂಟ್‌ಗೆ ಸರಕಾರದಿಂದ ನೂತನ ಕೋಡ್
ಹಣದುಬ್ಬರ: ಶೇ.10.68ಕ್ಕೆ ಇಳಿಕೆ
ಮೊಬೈಲ್ ಗೇಮ್‌‌ಗೆ ಆರ್ಥಿಕ ಬಿಕ್ಕಟ್ಟು ಹೊಡೆತ
ಶೇರುಪೇಟೆ ಕುಸಿತ: ಬೇಡಿಕೆಯತ್ತ ಅಂಚೆ ಕಚೇರಿ