ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಒಪ್ಪಂದದಿಂದ ಹಿಂದೆ ಸರಿಯಲಿರುವ ಯಾಹೂ-ಗೂಗಲ್?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಪ್ಪಂದದಿಂದ ಹಿಂದೆ ಸರಿಯಲಿರುವ ಯಾಹೂ-ಗೂಗಲ್?
ಗೂಗಲ್ ಇಂಕ್ ಮತ್ತು ಯಾಹೂ ಇಂಕ್ ತಮ್ಮ ನಡುವಿನ ಒಪ್ಪಂದದಿಂದ ಹಿಂದಕ್ಕೆ ಸರಿಯುವುದಾಗಿ ಮುಂದಿನ ವಾರ ಘೋಷಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಯಾಹೂ ಮತ್ತು ಗೂಗಲ್ ನಡುವಿನ ಶೋಧ ಜಾಹೀರಾತು ಒಪ್ಪಂದವನ್ನುಕಾರ್ಯಗತಗೊಳಿಸುವ ಸಂಬಂಧ ಅಮೆರಿಕ ನ್ಯಾಯಾಂಗ ವಿಭಾಗದೊಂದಿಗೆ ತೀರ್ಮಾನಕ್ಕೆ ಬರಲು ಎರಡೂ ಇಂಟರ್ನೆಟ್ ಕಂಪನಿಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಬೆಳವಣಿಗೆ ಕಂಡುಬರುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಜೂನ್ ತಿಂಗಳಲ್ಲಿ ಸ್ಥಗಿತಗೊಂಡಿದ್ದ ಉಭಯ ಕಂಪನಿಗಳ ನಡುವಿನ ಒಪ್ಪಂದದ ಕಾರ್ಯಗತವನ್ನು ಮುಂದೂಡಲಾಗುವುದು ಎಂದು ಈ ತಿಂಗಳ ಪ್ರಾರಂಭದಲ್ಲಿ ಎರಡೂ ಕಂಪನಿಗಳು ಹೇಳಿದ್ದವು.

ಕೆಲವು ಯಾಹೂ ಆನ್‌ಲೈನ್‌ನಲ್ಲಿ ಗೂಗಲ್‌ಗೆ ಜಾಹೀರಾತು ಮಾರಾಟ ಮಾಡಲು ಅನುವು ಮಾಡಿಕೊಡುವ ಈ ಒಪ್ಪಂದವು ಜಾಹೀರಾತಿನ ಬೆಲೆ ಹೆಚ್ಚಳದಿಂದಾಗಿ ಜಾಹೀರಾತುದಾರರ ಆಕ್ರೋಶಕ್ಕೆ ಒಳಗಾಗಿತ್ತು.

ಅಮೆರಿಕ ನ್ಯಾಯಾಂಗ ವಿಭಾಗದೊಂದಿಗಿನ ಎರಡೂ ಕಂಪನಿಗಳ ಮಾತುಕತೆಯ ನಂತರ, ಈ ಒಪ್ಪಂದದಿಂದ ಹಿಂದಕ್ಕೆ ಸರಿಯುವ ಬಗ್ಗೆ ಕಂಪನಿಗಳು ನಿರ್ಧರಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಏನೇ ಆದರೂ, ಈ ಒಪ್ಪಂದವು ಆನ್‌ಲೈನ್ ಜಾಹೀರಾತಿನಲ್ಲಿ ಯಾಹೂವಿನ ಸ್ಪರ್ಧಾತ್ಮಕ ಸ್ಥಾನವನ್ನು ಬಲಗೊಳಿಸಲಿದ್ದು, ಒಪ್ಪಂದದ ಕುರಿತಾಗಿ ಎರಡೂ ಕಂಪನಿಗಳ ನಡುವೆ ಮಾತುಕತೆಯು ಸಾಗುತ್ತಿದೆ ಮತ್ತು ನಿಯಂತ್ರಕರೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಯಾಹೂ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಸೋಚಾಂ ವರದಿಗೆ ಸರಕಾರ ಆಕ್ರೋಶ
ಬಿಗ್‌ ಟಿ.ವಿ ಸಂಪರ್ಕ ಕೇವಲ 700 ರೂ.ಮಾತ್ರ.
'ಆರ್‌ಬಿಐ ಕ್ರಮಗಳಿಂದ ಸೂಕ್ತ ಪ್ರಯೋಜನವಿಲ್ಲ'
ಟಿವಿ ಕಂಟೆಂಟ್‌ಗೆ ಸರಕಾರದಿಂದ ನೂತನ ಕೋಡ್
ಹಣದುಬ್ಬರ: ಶೇ.10.68ಕ್ಕೆ ಇಳಿಕೆ
ಮೊಬೈಲ್ ಗೇಮ್‌‌ಗೆ ಆರ್ಥಿಕ ಬಿಕ್ಕಟ್ಟು ಹೊಡೆತ