ಜಾಗತಿಕ ಹಣಕಾಸು ಬಿಕ್ಕಟ್ಟಿನ ನಡುವೆಯೂ, ಭಾರತದ ಆರ್ಥಿಕತೆಯು ಶೇ.ಏಳರಷ್ಟು ಅಭಿವೃದ್ಧಿಗೊಳ್ಳಲಿದ್ದು, ಪ್ರಸಕ್ತವಿರುವ ಉದ್ಯೋಗ ಮಟ್ಟದಲ್ಲಿ ಯಾವುದೇ ಕಡಿತ ಉಂಟಾಗುವುದಿಲ್ಲ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.2008-09 ರ ಅವಧಿಯಲ್ಲಿ ಭಾರತದ ಆರ್ಥಿಕತೆಯು ಶೇ.ಏಳರಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದ್ದು, ಇದು ಶೇ.7.5ರಷ್ಟಾಗುವ ಸಾಧ್ಯತೆಯೂ ಇದೆ. ಆದರೆ, ಶೇ. ಏಳಕ್ಕಿಂತ ಕೆಳಕ್ಕಿಳಿಯುವುದಿಲ್ಲ ಎಂಬುದಾಗಿ ಚಿದಂಬರಂ ಸ್ಪಷ್ಟಪಡಿಸಿದ್ದಾರೆ.ಈ ಮೊದಲು ನಿರೀಕ್ಷಿಸಿದ್ದ ಶೇ.ಒಂಬತ್ತರಷ್ಟು ಆರ್ಥಿಕ ಅಭಿವೃದ್ಧಿಯು ಸಾಕಷ್ಟು ಉದ್ಯೋಗವನ್ನು ನಿರ್ಮಿಸುತ್ತದೆ. ಆದರೆ, ಅಭಿವೃದ್ಧಿ ದರದಲ್ಲಿನ ಇಳಿಕೆಯು ಉದ್ಯೋಗ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಇದೇ ಕಾರಣಕ್ಕಾಗಿ ಅಸೋಚಾಂನ ಉದ್ಯೋಗ ಕಡಿತದ ವರದಿಯನ್ನು ತಾನು ಒಪ್ಪುವುದಿಲ್ಲ ಎಂಬುದಾಗಿ ಚಿದಂಬರಂ ಸುದ್ದಿಗಾರರಿಗೆ ತಿಳಿಸಿದ್ದಾರೆ.ಉದ್ಯೋಗ ನಿರ್ಮಿಸುವ ಹಂತದಲ್ಲಿ ಇಳಿಕೆ ಉಂಟಾಗಬಹುದು ಆದರೆ, ಆರ್ಥಿಕ ಅಭಿವೃದ್ಧಿಯ ಪ್ರಮಾಣವು ಶೇ.ಏಳರಷ್ಟಿದ್ದರೂ, ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. |
|