ಜಾಗತಿಕ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಉಂಟಾಗಿರುವುದರ ಹಿನ್ನೆಲೆಯಲ್ಲಿ, ಪೆಟ್ರೋಲ್ ಮಾರಾಟದಿಂದಾಗಿ ಶನಿವಾರದಿಂದ ಕಂಪನಿಯು ಲಾಭಾಂಶ ಗಳಿಸಲು ಪ್ರಾರಂಭಿಸುವುದಾಗಿ ರಾಜ್ಯ ನಿಯಂತ್ರಿತ ತೈಲ ಮಾರಾಟ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಹೇಳಿದೆ.
ಶನಿವಾರದಿಂದ ಪೆಟ್ರೋಲ್ ಲಾಭಾಂಶವು ಧನಾತ್ಮಕವಾಗಲಿದೆ. ಅಕ್ಟೋಬರ್ ತಿಂಗಳಲ್ಲಿನ ಸರಾಸರಿ ಕಚ್ಚಾತೈಲ ಬೆಲೆಯ ಆಧಾರದಲ್ಲಿ ಕಂಪನಿಯ ಲಾಭ ಪ್ರಮಾಣವು ಲೀಟರ್‌ಗೆ ನಾಲ್ಕು ರೂ. ಆಗಲಿದೆ ಎಂದು ಐಒಸಿ ಮುಖ್ಯಸ್ಥ ಸಾರ್ಥಕ್ ಬಹುರಿಯಾ ತಿಳಿಸಿದ್ದಾರೆ.
ಏನೇ ಆದರೂ, ಡೀಸೇಲ್ ಮಾರಾಟದಲ್ಲಿ ಕಂಪನಿಯು ಪ್ರತಿ ಲೀ.ಗೆ ರೂ. ಒಂದರಂತೆ ನಷ್ಟ ಅನುಭವಿಸಲಿದೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ ಸೀಮೆಎಣ್ಣೆ ಮಾರಾಟದಲ್ಲಿನ ನಷ್ಟವು ಪ್ರತಿ ಲೀ.ಗೆ ರೂ.22 ಮತ್ತು ಎಲ್‌ಪಿಜಿ ಮಾರಾಟದಲ್ಲಿನ ನಷ್ಟವು ಪ್ರತಿ ಸಿಲಿಂಡರ್‌ಗೆ 343 ರೂ.ಗಳಾಗಲಿದೆ ಎಂದು ಕಂಪನಿಯು ಸೂಚಿಸಿದೆ.
ಜುಲೈ ತಿಂಗಳಲ್ಲಿ ಬ್ಯಾರ್ ಒಂದಕ್ಕೆ 147 ಡಾಲರ್‌ಗೆ ತಲುಪಿದ್ದ ಕಚ್ಚಾತೈಲ ಬೆಲೆಯು, ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಬ್ಯಾರ್‌ಗೆ 64 ಡಾಲರ್‌ಗೆ ಇಳಿಕೆಗೊಂಡಿತ್ತು. |