ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್ ಇಂಧನ ಬೆಲೆ ಶೇ.17ರಷ್ಟು ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್ ಇಂಧನ ಬೆಲೆ ಶೇ.17ರಷ್ಟು ಇಳಿಕೆ
ಜಾಗತಿಕ ಕಚ್ಚಾತೈಲ ಬೆಲೆಯಲ್ಲಿ ಗಮನಾರ್ಹ ಇಳಿಕೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಸರಕಾರಿ ಕ್ಷೇತ್ರದ ತೈಲ ಮಾರುಕಟ್ಟೆ ಕಂಪನಿಗಳು ಎಟಿಎಫ್ ಅಥವಾ ಜೆಟ್ ಇಂಧನ ಬೆಲೆಯನ್ನು ಶೇ.17ರಷ್ಟು ಕಡಿತಗೊಳಿಸಿವೆ.

ಏನೇ ಆದರೂ, ಕಳೆದ ಕೆಲವು ತಿಂಗಳುಗಳಲ್ಲಿ ಅತ್ಯಂತ ನಷ್ಟವನ್ನು ಹೊಂದಿದ್ದರಿಂದ ವಿಮಾನದರವನ್ನು ಇಳಿಸುವ ಯಾವುದೇ ಸಾಧ್ಯತೆಗಳನ್ನು ಏರ್‌ಲೈನ್ಸ್ ಸಂಸ್ಥೆಗಳು ತಳ್ಳಿಹಾಕಿವೆ.

ನೂತನ ಎಟಿಎಫ್ ದರಗಳು ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್‌ಗೆ 47,018ರೂ., ಮುಂಬೈನಲ್ಲಿ 48,657ರೂ,ಯಷ್ಟಿದ್ದು, ಎರಡೂ ನಗರಗಳಲ್ಲಿ ಕ್ರಮವಾಗಿ ಎಟಿಎಫ್ ಬೆಲೆಯಲ್ಲಿ ಶೇ.16.7 ಮತ್ತು ಶೇ.16.8ರಷ್ಟು ಇಳಿಕೆ ಉಂಟಾಗಿದೆ. ನೂತನ ದರಗಳು ಶನಿವಾರದಿಂದ ಜಾರಿದೆ ಬರಲಿವೆ.

ಸೆಪ್ಟಂಬರ್ ತಿಂಗಳಲ್ಲಿ ಬ್ಯಾರಲ್ ಒಂದಕ್ಕೆ 98 ಡಾಲರ್‌ನಷ್ಟಿದ್ದ ಜಾಗತಕಿ ಕಚ್ಚಾತೈಲ ಬೆಲೆಯು ಅಕ್ಟೋಬರ್ 31ಕ್ಕೆ ಬ್ಯಾರಲ್‌ವೊಂದಕ್ಕೆ 63.47ಕ್ಕೆ ಇಳಿಕೆಗೊಂಡಿತ್ತು. ಅಲ್ಲದೆ, ಇದು ಇನ್ನಷ್ಟು ಇಳಿಕೆಗೊಳ್ಳುವ ಸಂಭವವಿದೆ.

ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ ತೈಲ ಮಾರುಕಟ್ಟೆ ಕಂಪನಿಗಳು ಜೆಟ್ ಇಂಧನವನ್ನು ಶೇ.37ರಷ್ಟು ಕಡಿತಗೊಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೋಟ್‌‌ರೋಲಾದಿಂದ 3000 ನೌಕರರ ವಜಾ
ಪೆಟ್ರೋಲ್ ಮಾರಾಟದಿಂದ ಲಾಭ: ಐಒಸಿ
ಭಾರತದ ಆರ್ಥಿಕತೆಯು ಶೇ.7ಕ್ಕೆ ಏರಲಿದೆ: ಚಿದಂಬರಂ
ಒಪ್ಪಂದದಿಂದ ಹಿಂದೆ ಸರಿಯಲಿರುವ ಯಾಹೂ-ಗೂಗಲ್?
ಅಸೋಚಾಂ ವರದಿಗೆ ಸರಕಾರ ಆಕ್ರೋಶ
ಬಿಗ್‌ ಟಿ.ವಿ ಸಂಪರ್ಕ ಕೇವಲ 700 ರೂ.ಮಾತ್ರ.