ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತೀಯ ಬ್ಯಾಂಕ್‌ಗಳಲ್ಲಿ ಫಾರೆಕ್ಸ್ ಬಿಕ್ಕಟ್ಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ಬ್ಯಾಂಕ್‌ಗಳಲ್ಲಿ ಫಾರೆಕ್ಸ್ ಬಿಕ್ಕಟ್ಟು
ದೇಶದ ನಗದು ಹರಿವು ಪರಿಸ್ಥಿತಿಯಲ್ಲಿನ ಸುಧಾರಣೆಯ ಹೊರತಾಗಿಯೂ, ರಾಜ್ಯ ನಿಯಂತ್ರಿತ ಬ್ಯಾಂಕ್‌ಗಳಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಐಸಿಐಸಿಐ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯವಹಾರ ಬದ್ಧತೆಗಳನ್ನು ಪೂರೈಸುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ನಗದು ಹರಿವಿನ ಸಮಸ್ಯೆಯಲ್ಲಿ ಸುಧಾರಣೆ ಕಂಡುಬಂದಿದ್ದರೂ, ನಗದು ಕೊರತೆ ಕಂಡುಬರುತ್ತಿರುವುದಾಗಿ ಬ್ಯಾಂಕಿಂಗ್ ವಿಶ್ಲೇಷಕರು ತಿಳಿಸಿದ್ದು, ಪ್ರಸಕ್ತವಿರುವ ಸಾಲ ಬೇಡಿಕೆಯನ್ನು ಪೂರೈಸಲು ನಗದು ಹರಿವು ಪ್ರಮಾಣವು ಸಾಕಾಗಬಹುದು ಆದರೆ, ವಿದೇಶಿ ವ್ಯವಹಾರವನ್ನು ಹೊಂದಿರುವ ಬ್ಯಾಂಕ್‌ಗಳು ನಗದು ಹರಿವು ಕೊರತೆಯನ್ನು ಇನ್ನೂ ಎದುರಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನೇ ಆದರೂ, ಆಂತಕ ಪಡುವಂತಹ ಯಾವುದೇ ಸಮಸ್ಯೆಗಳನ್ನು ಬ್ಯಾಂಕ್ ಹೊಂದಿಲ್ಲ. ಕೇವಲ ಸಣ್ಣ ಪುಟ್ಟ ತೊಂದರೆಗಳನ್ನು ಹೊರತಾಗಿ ಬ್ಯಾಂಕ್ ಪರಿಸ್ಥಿತಿಯು ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಐಸಿಐಸಿಐ ಮತ್ತು ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ನಡುವೆ, ಬ್ಯಾಂಕ್‌ಗಳ ಫಾರೆಕ್ಸ್ ಬಿಕ್ಕಟ್ಟು ಸಮಸ್ಯೆಯನ್ನು ಹಣಕಾಸು ಸಚಿವರು ಅರಿತುಕೊಂಡಿದ್ದು, ಜಾಗತಿಕ ಬ್ಯಾಂಕ್ ಪ್ರಕ್ಷುಬ್ಧತೆಯೊಂದಿಗೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಬ್ಯಾಂಕಿಂಗ್ ಉದ್ಯಮಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡಲಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಐಸಿಐಸಿಐ ಬ್ಯಾಂಕ್ ಯುಕೆ, ಸಿಂಗಾಪುರ್, ಹಾಂಗ್‌ಕಾಂಗ್, ರಶ್ಯಾ, ಕೆನಡಾ ಮತ್ತು ಇತರ ಕಡೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಬೃಹತ್ ಪ್ರಮಾಣದಲ್ಲಿ ವಿದೇಶಿ ವ್ಯವಹಾರವನ್ನು ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್ ಇಂಧನ ಬೆಲೆ ಶೇ.17ರಷ್ಟು ಇಳಿಕೆ
ಮೋಟ್‌‌ರೋಲಾದಿಂದ 3000 ನೌಕರರ ವಜಾ
ಪೆಟ್ರೋಲ್ ಮಾರಾಟದಿಂದ ಲಾಭ: ಐಒಸಿ
ಭಾರತದ ಆರ್ಥಿಕತೆಯು ಶೇ.7ಕ್ಕೆ ಏರಲಿದೆ: ಚಿದಂಬರಂ
ಒಪ್ಪಂದದಿಂದ ಹಿಂದೆ ಸರಿಯಲಿರುವ ಯಾಹೂ-ಗೂಗಲ್?
ಅಸೋಚಾಂ ವರದಿಗೆ ಸರಕಾರ ಆಕ್ರೋಶ