ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್‌ಬಿಐನಿಂದ ರೇಪೋ, ಸಿಆರ್ಆರ್ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿಐನಿಂದ ರೇಪೋ, ಸಿಆರ್ಆರ್ ದರ ಕಡಿತ
PTI
ಬ್ಯಾಂಕಿಂಗ್ ವ್ಯವಸ್ಥೆಗೆ 1,85,000 ಕೋಟಿ ರೂ. ತುಂಬಿದ ನಂತರ, ಅನಿರೀಕ್ಷಿತ ಬೆಳವಣಿಗೆಯೆಂಬಂತೆ, ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ನಗದು ಮೀಸಲು ಅನುಪಾತವನ್ನು ಶೇ.1 ಮತ್ತು ರೇಪೋ ದರವನ್ನು ಶೇ.0.50ರಷ್ಟು ಕಡಿಕಗೊಳಿಸಿದ್ದು, ಈ ಮೂಲಕ ಬಡ್ಡಿದರ ಮಂದಗೊಳ್ಳುವ ಸೂಚನೆಯನ್ನು ನೀಡಿದೆ.

ಬ್ಯಾಂಕಿಂಗ್ ವ್ಯವಸ್ಥೆಗೆ ಮತ್ತೆ 40,000 ಕೋಟಿ ರೂ. ನಗದು ಹರಿವನ್ನು ತುಂಬುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 100 ಅಂಶಗಳಷ್ಟು ಇಳಿಕೆಗೊಳಿಸುವ ಮೂಲಕ ಸಿಆರ್ಆರ್ ದರವನ್ನು ಶೇ.5.5ಕ್ಕೆ ತಗ್ಗಿಸಿದೆ.

ಇದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರವನ್ನು 50 ಅಂಶಗಳಷ್ಟು ಮತ್ತು ಎಸ್ಎಲ್ಆರ್ ದರವನ್ನು 100 ಅಂಶಗಳಷ್ಟು ಇಳಿಸಿದ್ದು, ಈ ಮೂಲಕ ರೇಪೋ ದರವು ಶೇ.7.5ಕ್ಕೆ ಮತ್ತು ಎಸ್ಎಲ್ಆರ್ ದರವು ಶೇ.24ಕ್ಕೆ ಇಳಿಕೆಗೊಂಡಿದೆ.

ಆರ್‌ಬಿಐನ ನಿರ್ಧಾರವನ್ನು ಐಸಿಐಸಿಐ ಬ್ಯಾಂಕ್ ಸ್ವಾಗತಿಸಿದ್ದು, ಆರ್‌ಬಿಐನ ಈ ಬೆಳವಣಿಗೆಯು ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚು ನಗದು ಹರಿವನ್ನು ತುಂಬಲು ಸಹಾಯಕವಾಗಲಿದೆ ಎಂದಿದೆ. ಅಲ್ಲದೆ, ಬಡ್ಡಿದರ ಕಡಿತಗೊಳಿಸುವ ಸೂಚನೆಯನ್ನೂ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತೀಯ ಬ್ಯಾಂಕ್‌ಗಳಲ್ಲಿ ಫಾರೆಕ್ಸ್ ಬಿಕ್ಕಟ್ಟು
ಜೆಟ್ ಇಂಧನ ಬೆಲೆ ಶೇ.17ರಷ್ಟು ಇಳಿಕೆ
ಮೋಟ್‌‌ರೋಲಾದಿಂದ 3000 ನೌಕರರ ವಜಾ
ಪೆಟ್ರೋಲ್ ಮಾರಾಟದಿಂದ ಲಾಭ: ಐಒಸಿ
ಭಾರತದ ಆರ್ಥಿಕತೆಯು ಶೇ.7ಕ್ಕೆ ಏರಲಿದೆ: ಚಿದಂಬರಂ
ಒಪ್ಪಂದದಿಂದ ಹಿಂದೆ ಸರಿಯಲಿರುವ ಯಾಹೂ-ಗೂಗಲ್?