ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾರುತಿ ಕಾರು ಮಾರಾಟದಲ್ಲಿ ಶೇ.7ರಷ್ಟು ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿ ಕಾರು ಮಾರಾಟದಲ್ಲಿ ಶೇ.7ರಷ್ಟು ಇಳಿಕೆ
PTI
ದೇಶದ ಅತಿ ದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಜುಕಿಯ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಶೇ. ಏಳರಷ್ಟು ಇಳಿಕೆ ಉಂಟಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಪ್ರಸಕ್ತ ಅವಧಿಯಲ್ಲಿ ಮಾರುತಿ 64,490 ಯೂನಿಟ್‌ ಮಾರಾಟ ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದರ ಪ್ರಮಾಣವು 69,415ರಷ್ಟಿತ್ತು.

ಕಂಪನಿಯ ದೇಶೀಯ ಮಾರಾಟದಲ್ಲೂ ಇಳಿಕೆ ಉಂಟಾಗಿದ್ದು, ಕಳೆದ ವರ್ಷ 64,258 ಯೂನಿಟ್‌ಗಳಷ್ಟಿದ್ದ ಮಾರಾಟವು ಈ ವರ್ಷ 59,127ಕ್ಕೆ ಇಳಿಕೆಗೊಳ್ಳುವ ಮೂಲಕ, ದೇಶೀಯ ಮಾರಾಟದಲ್ಲೂ ಶೇ.8ರಷ್ಟು ಕುಸಿತ ಉಂಟಾಗಿದೆ ಎಂದು ಕಂಪನಿಯ ತಿಳಿಸಿದೆ.

ಏನೇ ಆದರೂ, ಮಾರುತಿ ಸುಜುಕಿಯ ರಫ್ತು ಪ್ರಮಾಣದಲ್ಲಿ ಏರಿಕೆ ಉಂಟಾಗಿದ್ದು, ಕಳೆದ ವರ್ಷ 5,157 ಯೂನಿಟ್‌ನ್ನು ಕಂಪನಿಯು ರಫ್ತು ಮಾಡಿದ್ದು, ಈ ವರ್ಷ ಅದು 59,127ಕ್ಕೆ ಏರಿದೆ ಎಂದು ಕಂಪನಿ ಹೇಳಿದೆ.

ಮಾರುತಿ 800 ಕಾರುಗಳ ಮಾರಾಟದಲ್ಲಿ ಶೇ.26ರಷ್ಟು ಇಳಿಕೆ ಉಂಟಾದರೆ, ಆಲ್ಟೋ, ಜೆನ್, ಸ್ವಿಫ್ಟ್, ವಾಗನರ್ ಮುಂತಾದ ಕಾರುಗಳ ಮಾರಾಟದಲ್ಲಿ ಶೇ.7.70ರಷ್ಟು ಇಳಿಕೆ ಉಂಟಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ‌್‌ಬಿಐನಿಂದ ಇನ್ನಷ್ಟು ಕ್ರಮ ಅಗತ್ಯ: ಇಂಡಿಯಾ ಇಂಕ್
ಆರ್‌ಬಿಐನಿಂದ ರೇಪೋ, ಸಿಆರ್ಆರ್ ದರ ಕಡಿತ
ಭಾರತೀಯ ಬ್ಯಾಂಕ್‌ಗಳಲ್ಲಿ ಫಾರೆಕ್ಸ್ ಬಿಕ್ಕಟ್ಟು
ಜೆಟ್ ಇಂಧನ ಬೆಲೆ ಶೇ.17ರಷ್ಟು ಇಳಿಕೆ
ಮೋಟ್‌‌ರೋಲಾದಿಂದ 3000 ನೌಕರರ ವಜಾ
ಪೆಟ್ರೋಲ್ ಮಾರಾಟದಿಂದ ಲಾಭ: ಐಒಸಿ