ಎಚ್‌ಎಫ್‌ಸಿಎಲ್ ಇನ್ಫೋಟೆಲ್ ಲಿಮಿಟೆಡ್, ಗ್ರಾಮೀಣ ಮತ್ತು ಪಟ್ಟಣ ಮತ್ತು ನಗರ ಪ್ರದೇಶಗಳನ್ನು ಗಮನದಲ್ಲಿಟ್ಟು ಪಂಜಾಬ್ ರಾಜ್ಯದಲ್ಲಿ ಪಿಂಗ್ ಮೊಬೈಲ್ಸ್ ಕಲರ್ ಹ್ಯಾಂಡ್‌ಸೆಟ್‌ನ್ನು ಕೇವಲ 499 ರೂ.ಗಳಿಗೆ ಖರೀದಿಗೆ ಲಭ್ಯವಿದ್ದು ಮಾರುಕಟ್ಟೆಗೆ ಪರಿಚಯಿಸಿದೆ. ಕಲರ್ ಹ್ಯಾಂಡ್‌ಸೆಟ್ ಝಟಿಇ-c332 ಕೇವಲ 499 ರೂ.ಗಳಿಗೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.ಎಚ್‌ಎಫ್‌ಸಿಎಲ್ ಇನ್ಫೋಟೆಲ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಜಿ.ಡಿ.ಸಿಂಗ್ ಮಾತನಾಡಿ ಸಂಪರ್ಕದಿಂದಾಗಿ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು, ಪಂಜಾಬ್ ರಾಜ್ಯದ ಗ್ರಾಮೀಣ ಭಾಗಗಳು, ರೈತರು, ಯುವಕರು, ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯುಬೇಕೆನ್ನುವುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.ಪಿಂಗ್ ಮೊಬೈಲ್ ಪಂಜಾಬ್ ಮತ್ತು ಚಂಡೀಗಢ ರಾಜ್ಯಗಳಲ್ಲಿ ಪ್ರತಿ ಸೆಕೆಂಡ್‌ಗೆ ಒಂದು ಪೈಸೆಯಂತೆ ಕರೆ ದರವನ್ನು ನಿಗದಿಪಡಿಸಿದ್ದು, ಪ್ರೀಪೇಡ್ ಗ್ರಾಹಕರಿಗೆ ಡಬಲ್ ಟಾಕ್‌ಟೈಮ್ ರಿಚಾರ್ಜ್ ಕೂಪನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಇತ್ತೀಚೆಗೆ ಆಧುನಿಕ ಮಾಡೆಲ್‌ನ ಕಲರ್ ಹ್ಯಾಂಡ್‌ಸೆಟ್ ಬಿಡುಗಡೆಗೊಳಿಸಲಾಗಿದೆ ಎಂದು ಕಂಪೆನಿಯ ಸಿಒಒ ಡಿ.ಸಿಂಗ್ ತಿಳಿಸಿದ್ದಾರೆ.ಪಿಂಗ್ ಈಸ್ ಕಿಂಗ್ ಎನ್ನುವ ಬ್ಯಾನರ್‌ನಡಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪಂಜಾಬ್ ಮತ್ತು ಚಂಡೀಗಢ್ ರಾಜ್ಯಗಳ 270 ಪಟ್ಟಣಗಳು ಮತ್ತು 2050 ಗ್ರಾಮಗಳಿಗೆ ಸೇವಾ ಸೌಲಭ್ಯವಿದ್ದು ಸುಮಾರು 8 ಸಾವಿರ ರಿಟೇಲ್ ಔಟ್‌ಲೆಟ್‌ಗಳಿದ್ದು, ಕೇವಲ ಒಂದು ವರ್ಷದ ಅವಧಿಯಲ್ಲಿ 2.5 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಸಿಡಿಎಂಎ ಹ್ಯಾಂಡ್‌ಸೆಟ್‌ಗಳನ್ನು ಸಿಮ್‌ನೊಂದಿಗೆ 151 ರೂ, 201 ರೂ, 251 ರೂ. ಗಳ ರಿಚಾರ್ಜ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯ ಕರೆಗಳನ್ನು ಪ್ರತಿ ಸೆಕೆಂಡ್‌ಗೆ ಒಂದು ಪೈಸೆಯಂತೆ ಹಾಗೂ ಎಸ್‌ಟಿಡಿ ಕರೆಗಳನ್ನು ಪ್ರತಿ ನಿಮಿಷಕ್ಕೆ 1.50 ರೂಪಾಯಿ ನಿಗದಿಪಡಿಸಲಾಗಿದೆ. ಗ್ರಾಹಕರು ಮಾಸಿಕ ಅವಧಿಯ ರಿಚಾರ್ಜ್‌ನೊಂದಿಗೆ ಎಸ್‌ಟಿಡಿ ಸೌಲಭ್ಯವನ್ನು ಪ್ರತಿ ನಿಮಿಷಕ್ಕೆ ಒಂದು ರೂಪಾಯಿಯಂತೆ ಪಡೆಯಬಹುದಾಗಿದೆ. ಹಾಗೂ 33 ರೂಪಾಯಿಗಳ ರಿಚಾರ್ಜ್ ಮಾಡಿದಲ್ಲಿ 10 ರೂಪಾಯಿ ಟಾಕ್‌ಟೈಮ್ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.. ಪಂಜಾಬ್ ಮತ್ತು ಚಂಡೀಗಢ್ ರಾಜ್ಯಗಳಲ್ಲಿ ಎಚ್‌ಎಫ್‌ಸಿಎಲ್ ಇನ್ಫೋಟೆಲ್ ಲಿಮಿಟೆಡ್ ಪ್ರಮುಖ ಟೆಲಿಕಾಂ ಕಂಪೆನಿಯಾಗಿದ್ದು, ಸ್ಥಿರ ದೂರವಾಣಿ ಮತ್ತು ಅಂತರ್ಜಾಲ ಬ್ರಾಡ್‌ಬ್ಯಾಂಡ್ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ ಹೆಚ್ಚಿನ ವಿವರಗಳಿಗಾಗಿ ವಿಜಯ್ ಸಿಂಗ್ ಬೈನ್ಸಾಲಾಪ್ರಧಾನ ವ್ಯವಸ್ಥಾಪಕ, ಎಚ್‌ಎಫ್‌ಸಿಎಲ್ ಇನ್ಫೋಟೆಲ್ ಲಿಮಿಟೆಡ್ ಮೊ: 9877012623CorePR, 093161 33924 |
|