ಗ್ಯಾನೆಟ್ ಕಂಪೆನಿಯು ಡಿಸೆಂಬರ್ ಆರಂಭದಲ್ಲಿ ತನ್ನ ನೌಕರವರ್ಗದಲ್ಲಿ ಶೇ.10ರಷ್ಟು ಕಡಿತ ಮಾಡುವುದಾಗಿ ಪ್ರಕಟಿಸಿದೆ. ಟೈಮ್, ನ್ಯೂಯಾರ್ಕ್ ಟೈಮ್ಸ್ ಮತ್ತಿತರ ದೊಡ್ಡ ಹೆಸರು ಪಡೆದ ಮಾಧ್ಯಮ ಸಂಸ್ಥೆಗಳಲ್ಲಿ ಉದ್ಯೋಗ ಕಡಿತದ ನಿರೀಕ್ಷೆಯೊಂದಿಗೆ ಅಮರಿಕದ ಆರ್ಥಿಕ ಸನ್ನಿವೇಶಕ್ಕೆ ಮಂಕು ಕವಿದಿದೆ.
ಕಳೆದ ಕೆಲವು ವಾರಗಳಿಂದ ಅಮೆರಿಕದ ಅನೇಕ ಸುದ್ದಿಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ನಿರ್ವಹಣೆ ವೆಚ್ಚ ತಗ್ಗಿಸಲು ಉದ್ಯೋಗಗಳನ್ನು ಕಡಿತಮಾಡುವ ತಮ್ಮ ಯೋಜನೆ ಪ್ರಕಟಿಸಿವೆ. ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಗ್ಯಾನೆಟ್‌ನಲ್ಲಿ ಲೇಆಫ್‌ಗಳು ಕಂಪೆನಿಯ ಮುಖ್ಯಪತ್ರಿಕೆ ಯುಎಸ್‌ಎ ಟುಡೆಗೆ ಅನ್ವಯವಾಗುವುದಿಲ್ಲ. ಆದರೆ ಅಮೆರಿಕದಲ್ಲಿರುವ ಕಂಪೆನಿಯ 84 ಪತ್ರಿಕೆಗಳಿಗೆ ಮತ್ತು 800 ಸಣ್ಣ ಮತ್ತು ಸ್ಥಳೀಯ ಪತ್ರಿಕೆಗಳಿಗೆ ಇದು ಅನ್ವಯಿಸುತ್ತದೆ.
ಅತೀ ದೊಡ್ಡ ಸುದ್ದಿಪತ್ರಿಕೆ ಪ್ರಕಾಶಕರಾದ ಗ್ಯಾನೆಟ್ ಎಷ್ಟು ಮಂದಿ ಕೆಲಸ ಕಳೆದುಕೊಳ್ಳುತ್ತಾರೆಂದು ಹೇಳಲು ನಿರಾಕರಿಸಿದೆ. ಶೇ.10ರಷ್ಟು ಅಂಕಿಅಂಶದ ಪ್ರಕಾರ ಸುಮಾರು 3000 ಜನರು ಕೆಲಸ ಕಳೆದುಕೊಳ್ಳಲಿದ್ದಾರೆಂದು ತಿಳಿದುಬಂದಿದೆ. |