ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತುಟ್ಟಿಯಾದ ವಿಮಾನಯಾನ: ಹೆಚ್ಚಿದ ರೈಲ್ವೇ ಬೇಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುಟ್ಟಿಯಾದ ವಿಮಾನಯಾನ: ಹೆಚ್ಚಿದ ರೈಲ್ವೇ ಬೇಡಿಕೆ
PTI
ವಿಮಾನಯಾನವು ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಮಾನ ಪ್ರಯಾಣಿಕರು ಈಗ ರೈಲ್ವೇ ಪ್ರಯಾಣದತ್ತ ಒಲವು ತೋರಿದ್ದು, ಎಸಿ ಫಸ್ಟ್‌ಕ್ಲಾಸ್ ಸೇರಿದಂತೆ ರೈಲ್ವೇ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಪ್ರಮಾಣದಲ್ಲಿ ಶೇ.30ರಷ್ಟು ಹೆಚ್ಚಳ ಉಂಟಾಗಿದೆ.

ವಿಮಾನ ಟಿಕೆಟ್ ದರ ಹೆಚ್ಚಳದಿಂದಾಗಿ ರೈಲ್ವೇ ಮುಂಗಡ ಕಾಯ್ದಿರಿಸುವಿಕೆಯ ಬೇಡಿಕೆಯಲ್ಲಿ ಏರಿಕೆ ಉಂಟಾಗಿದ್ದು, ಅದರಲ್ಲೂ ಅಪ್ಪರ್ ಕ್ಲಾಸ್‌ಗೆ ಬೇಡಿಕೆಯು ಹೆಚ್ಚಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

ಈ ಮೊದಲು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೆಲ್ಲಾ ಈಗ ರೈಲ್ವೇಯನ್ನು ತಮ್ಮ ಸಾರಿಗೆ ಮಾರ್ಗವನ್ನಾಗಿ ಬಳಸಿಕೊಳ್ಳುತ್ತಿದ್ದು, ಅದರಲ್ಲೂ ಹೆಚ್ಚಿನ ಮಂದಿ ಎಸಿ ಫಸ್ಟ್ ಕ್ಲಾಸ್‌ನ್ನೇ ಆಯ್ದುಕೊಳ್ಳುತ್ತಿದ್ದಾರೆ ಎಂದು ರೈಲ್ವೇ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೇವಲ ಸೆಪ್ಟೆಂಬರ್ ತಿಂಗಳಲ್ಲಿ ರೈಲ್ವೇಯು ಎಸಿ ಫಸ್ಟ್ ಕ್ಲಾಸ್‌ ಟಿಕೆಟ್ ಮಾರಾಟದಿಂದ 17.11 ಕೋಟಿ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದರ ಪ್ರಮಾಣವು 13.89 ಕೋಟಿ ರೂ.ಗಳಷ್ಟಿತ್ತು.

ಕಳೆದ ಆರು ತಿಂಗಳುಗಳಲ್ಲಿ ಎಸಿ ಬುಕ್ಕಿಂಗ್‌ನಲ್ಲೇ ರೈಲ್ವೇಯು 100 ಕೋಟಿ ರೂ.ಆದಾಯ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.26.45ರಷ್ಟು ಏರಿಕೆ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗ್ಯಾನೆಟ್‌ ಕಂಪೆನಿಯಲ್ಲಿ ಶೇ 10 ರಷ್ಟು ಹುದ್ದೆ ಕಡಿತ
ಗೃಹಸಾಲ, ಕಾರು ಸಾಲ ಅಗ್ಗದ ನಿರೀಕ್ಷೆ
ಕೇವಲ 499 ರೂ.ಗೆ ಕಲರ್ ಮೊಬೈಲ್‌‌‍‍‍!
ಮಾರುತಿ ಕಾರು ಮಾರಾಟದಲ್ಲಿ ಶೇ.7ರಷ್ಟು ಇಳಿಕೆ
ಆರ‌್‌ಬಿಐನಿಂದ ಇನ್ನಷ್ಟು ಕ್ರಮ ಅಗತ್ಯ: ಇಂಡಿಯಾ ಇಂಕ್
ಆರ್‌ಬಿಐನಿಂದ ರೇಪೋ, ಸಿಆರ್ಆರ್ ದರ ಕಡಿತ