ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಡ್ಡಿದರದಲ್ಲಿ ಇಳಿಕೆ ಉಂಟಾಗುತ್ತಿದೆ:ಬ್ಯಾಂಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಡ್ಡಿದರದಲ್ಲಿ ಇಳಿಕೆ ಉಂಟಾಗುತ್ತಿದೆ:ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ಹಣಕಾಸು ಮತ್ತು ನಗದು ಹರಿವು ಸಂಬಂಧಿತ ಪರಿಹಾರ ಕ್ರಮಗಳಿಂದಾಗಿ ಭಾರತದಲ್ಲಿ ಬಡ್ಡಿದರಗಳು ಇಳಿಕೆಗೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರದಂದು ರೇಪೋದರ, ಸಿಆರ್ಆರ್ ದರವನ್ನು ಕ್ರಮವಾಗಿ ಶೇ.0.50 ಮತ್ತು ಶೇ.1ರಷ್ಟು ಇಳಿಕೆಗೊಳಿಸಿತ್ತು.

ಕೇಂದ್ರ ಬ್ಯಾಂಕ್ ಸಿಆರ್ಆರ್ ಮತ್ತು ರೇಪೋ ದರವನ್ನು ಕಡಿತಗೊಳಿಸಿರುವುದರಿಂದ ಬ್ಯಾಂಕ್‌ಗಳಿಗೆ ಸಾಕಷ್ಟು ನಗದು ಹರಿವು ಸಿಗಲಿದೆ ಎಂದು ಭಾರತೀಯ ಬ್ಯಾಂಕ್ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ರಾಮಕೃಷ್ಣನ್ ತಿಳಿಸಿದ್ದಾರೆ.

ಸಿಆರ್ಆರ್ ಬ್ಯಾಂಕ್‌ ಬೊಕ್ಕಸಕ್ಕೆ ಸಾಕಷ್ಟು ಹಣವನ್ನು ಬಿಡುಗಡೆಗೊಳಿಸಿದ್ದು, ಆದ್ದರಿಂದ ಫಂಡ್ ವೆಚ್ಚವು ಕಡಿಮೆಗೊಳ್ಳಲಿದೆ. ಅಲ್ಲದೆ, ಬಡ್ಡಿದರದ ಕುರಿತಾಗಿ ಹೆಚ್ಚಿನ ಬ್ಯಾಂಕ್‌ಗಳು ಮುಂದಿನ ವಾರ ತಮ್ಮ ನಿರ್ಧಾರವನ್ನು ಕೈಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ಸಿಆರ್ಆರ್ ದರ ಇಳಿಕೆಯಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ 400 ಶತಕೋಟಿ ಹಣ ಬಿಡುಗಡೆಗೊಳ್ಳಲಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕ ಎಂ.ವಿ.ನಾಯರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತುಟ್ಟಿಯಾದ ವಿಮಾನಯಾನ: ಹೆಚ್ಚಿದ ರೈಲ್ವೇ ಬೇಡಿಕೆ
ಗ್ಯಾನೆಟ್‌ ಕಂಪೆನಿಯಲ್ಲಿ ಶೇ 10 ರಷ್ಟು ಹುದ್ದೆ ಕಡಿತ
ಗೃಹಸಾಲ, ಕಾರು ಸಾಲ ಅಗ್ಗದ ನಿರೀಕ್ಷೆ
ಕೇವಲ 499 ರೂ.ಗೆ ಕಲರ್ ಮೊಬೈಲ್‌‌‍‍‍!
ಮಾರುತಿ ಕಾರು ಮಾರಾಟದಲ್ಲಿ ಶೇ.7ರಷ್ಟು ಇಳಿಕೆ
ಆರ‌್‌ಬಿಐನಿಂದ ಇನ್ನಷ್ಟು ಕ್ರಮ ಅಗತ್ಯ: ಇಂಡಿಯಾ ಇಂಕ್