ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉದ್ಯಮ ಸಮಸ್ಯೆ ನಿವಾರಣೆಗೆ ಉನ್ನತ ಸಮಿತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯಮ ಸಮಸ್ಯೆ ನಿವಾರಣೆಗೆ ಉನ್ನತ ಸಮಿತಿ
ನಗದು ಹರಿವು ಬಿಕ್ಕಟ್ಟು, ಹೆಚ್ಚು ಬಡ್ಡಿದರ ಸೇರಿದಂತೆ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ, ಸರಕಾರವು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ಅಥವಾ ಹಣಕಾಸು ಸಚಿವರ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಲಾಗುವುದು ಎಂದು ವಾಣಿಜ್ಯ ಸಚಿವ ಜಿ.ಕೆ.ಪಿಳ್ಳೈ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಮತ್ತು ಉದ್ಯಮಿಗಳ ನಡುವೆ ನಡೆದ ಸಭೆಯ ವೇಳೆ ಸಮಿತಿ ರಚಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಹಣಕಾಸು ಸಚಿವ ಚಿದಂಬರಂ, ವಾಣಿಜ್ಯ ಮತ್ತು ಉದ್ಯಮ ಸಚಿವ ಕಮಲನಾಥ್, ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮುಂತಾದವರನ್ನು ಈ ಸಮಿತಿಯು ಒಳಗೊಳ್ಳಲಿದೆ.

ಗೃಹ ಮತ್ತು ನಿರ್ಮಾಣ ಕ್ಷೇತ್ರದ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನೀಡಲಾಗುವ ಸಲಹೆಗಳಿಗೆ ಸರಕಾರವು ಧನಾತ್ಮಕವಾಗಿ ಪ್ರತಿಕ್ರಿಯಿಸಲಿದೆ ಎಂದು ಪಿಳ್ಳೈ ಇದೇ ವೇಳೆ ತಿಳಿಸಿದ್ದಾರೆ.

ಉದ್ಯೋಗ ಕಡಿತ ಹಾಗೂ ಉದ್ಯೋಗ ನಿರ್ಮಾಣದಲ್ಲಿನ ಕುಂಠಿತದ ಕುರಿತು ಅವಲೋಕಿಸಲು ಪ್ರಧಾನಮಂತ್ರಿಗಳು ಈ ಸಮಿತಿಯನ್ನು ರಚಿಸುತ್ತಿದ್ದಾರೆ ಎಂದು ಅಸೋಚಾಂ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಶ್ಚಿಮ ಬಂಗಾಲದತ್ತ ಮಿತ್ತಲ್ ದೃಷ್ಟಿ
ಬ್ಯಾಂಕ್ ಠೇವಣಿ ಸುರಕ್ಷಿತ: ಪಿಎಂ ಭರವಸೆ
ಬಡ್ಡಿದರದಲ್ಲಿ ಇಳಿಕೆ ಉಂಟಾಗುತ್ತಿದೆ:ಬ್ಯಾಂಕ್
ತುಟ್ಟಿಯಾದ ವಿಮಾನಯಾನ: ಹೆಚ್ಚಿದ ರೈಲ್ವೇ ಬೇಡಿಕೆ
ಗ್ಯಾನೆಟ್‌ ಕಂಪೆನಿಯಲ್ಲಿ ಶೇ 10 ರಷ್ಟು ಹುದ್ದೆ ಕಡಿತ
ಗೃಹಸಾಲ, ಕಾರು ಸಾಲ ಅಗ್ಗದ ನಿರೀಕ್ಷೆ