ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೀಘ್ರವೇ ಬಡ್ಡಿದರ ಪುನರ್ ವಿಮರ್ಶೆ: ಐಸಿಐಸಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ಬಡ್ಡಿದರ ಪುನರ್ ವಿಮರ್ಶೆ: ಐಸಿಐಸಿಐ
ಆರ್ಥಿಕ ಅಭಿವೃದ್ಧಿಗಾಗಿ ಹೆಚ್ಚು ನಗದು ಹರಿವನ್ನು ತುಂಬುವ ಸರಕಾರದ ಭರವಸೆಯ ನಂತರ, ಮುಂದಿನ ಕೆಲವು ದಿನಗಳಲ್ಲಿ ಐಸಿಐಸಿಐ ಬ್ಯಾಂಕ್ ಬಡ್ಡಿದರ ಪರಿಷ್ಕರಣೆಯ ಕುರಿತು ಪುನರ್‌ ವಿಮರ್ಶೆಯನ್ನು ನಡೆಸಲಿದೆ ಎಂದು ಐಸಿಐಸಿಐ ಬ್ಯಾಂಕ್ ಆಡಳಿತ ನಿರ್ದೇಶಕ ಕೆ.ವಿ.ಕಾಮತ್ ತಿಳಿಸಿದ್ದಾರೆ.

ನಗದು ಹರಿವಿನ ಕುರಿತಾದ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ಧಾರದ ಪ್ರಭಾವವನ್ನು ಅವಲೋಕಿಸಿದ ನಂತರ ಬ್ಯಾಂಕ್ ಬಡ್ಡಿದರದ ಕುರಿತು ಪುನರ್ ವಿಮರ್ಶೆಯನ್ನು ನಡೆಸಲಿದೆ. ಈ ಕುರಿತಾಗಿ ಖಾಸಗಿ ವಲಯ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಲು ಚಿದಂಬರಂ ಒಪ್ಪಿಗೆ ನೀಡಿರುವುದಾಗಿ ಅಸೋಚಾಂ, ಎಐಸಿಸಿಐಯ ಮುಖ್ಯಸ್ಥರು ಮತ್ತು ಚಿದಂಬರಂ ಅವರೊಂದಿಗಿನ ಮಾತುಕತೆಯ ನಂತರ ಕೆ.ವಿ.ಕಾಮತ್ ಹೇಳಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.ಎಂಟರಷ್ಟು ಅಭಿವೃದ್ಧಿ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಇದಕ್ಕಾಗಿ ನಗದು ಹರಿವು, ಹಣದುಬ್ಬರ ನಿಯಂತ್ರಣ ಮತ್ತು ನೈತಿಕ ಧೈರ್ಯದ ಅಗತ್ಯವಿದ್ದು, ಇದಕ್ಕಾಗಿ ಸರಕಾರವು ಸಂಪೂರ್ಣ ಕಾರ್ಯನಿರ್ವಹಿಸಲಿದೆ ಎಂದು ಅವರು ಸೂಚಿಸಿದ್ದಾರೆ.

ಅಭಿವೃದ್ಧಿಯನ್ನು ಕಾರ್ಯಸೂಚಿಯಾಗಿಸಿಕೊಂಡು ಉದ್ಯಮಿಗಳೊಂದಿಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಾತುಕತೆ ನಡೆಸಿದ ನಂತರ, ಕಾಮತ್, ಎಐಸಿಸಿಐ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಅಸೋಚಾಂ ಅಧ್ಯಕ್ಷ ಸಜ್ಜನ್ ಜಿಂದಾಲ್ ಚಿದಂಬರಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯಮ ಸಮಸ್ಯೆ ನಿವಾರಣೆಗೆ ಉನ್ನತ ಸಮಿತಿ
ಪಶ್ಚಿಮ ಬಂಗಾಲದತ್ತ ಮಿತ್ತಲ್ ದೃಷ್ಟಿ
ಬ್ಯಾಂಕ್ ಠೇವಣಿ ಸುರಕ್ಷಿತ: ಪಿಎಂ ಭರವಸೆ
ಬಡ್ಡಿದರದಲ್ಲಿ ಇಳಿಕೆ ಉಂಟಾಗುತ್ತಿದೆ:ಬ್ಯಾಂಕ್
ತುಟ್ಟಿಯಾದ ವಿಮಾನಯಾನ: ಹೆಚ್ಚಿದ ರೈಲ್ವೇ ಬೇಡಿಕೆ
ಗ್ಯಾನೆಟ್‌ ಕಂಪೆನಿಯಲ್ಲಿ ಶೇ 10 ರಷ್ಟು ಹುದ್ದೆ ಕಡಿತ