ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಡ್ಡಿದರ, ನಗದು ಹರಿವು ಕುರಿತಾಗಿ ಚಿದಂಬರಂ ಚರ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಡ್ಡಿದರ, ನಗದು ಹರಿವು ಕುರಿತಾಗಿ ಚಿದಂಬರಂ ಚರ್ಚೆ
ನಗದು ಹರಿವು ಹಾಗೂ ಬ್ಯಾಂಕ್‌ಗಳ ನಿರ್ವಹಣೆಯ ಕುರಿತು ವಿಮರ್ಷೆ ನಡೆಸಲು ಹಣಕಾಸು ಸಚಿವ ಪಿ.ಚಿದಂಬರಂ ಸರಕಾರಿ ವಲಯ ಬ್ಯಾಂಕ್‌ನ ಉನ್ನತ ಕಾರ್ಯನಿರ್ವಾಹಕರೊಂದಿಗೆ ಮಂಗಳವಾರ ಸಭೆ ನಡೆಸಿದರು.

ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಜಾಗತಿಕ ಹಣಕಾಸು ಬಿಕ್ಕಟ್ಟಿನ ಪ್ರಭಾವ ಮತ್ತು ಇದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿಯೂ ಚಿದಂಬರಂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಿದರು.

ಇದರೊಂದಿಗೆ, ಬಡ್ಡಿದರ ಕಡಿತಗೊಳಿಸುವಂತೆ ಚಿದಂಬರಂ ಅವರು ಈ ಸಭೆಯಲ್ಲಿ ಬ್ಯಾಂಕ್‌ಗಳಿಗೆ ಕರೆ ನೀಡಿದ್ದು, ಬ್ಯಾಂಕ್‌ಗಳು ಬಡ್ಡಿದರ ಕಡಿತಗೊಳಿಸುವ ಭರವಸೆಯನ್ನು ಸಭೆಯ ವೇಳೆ ನೀಡಿರುವುದಾಗಿ ಸಭೆಯ ನಂತರ ಚಿದಂಬರಂ ತಿಳಿಸಿದ್ದಾರೆ.

ನಗದು ಹರಿವು ಪ್ರಮಾಣವನ್ನು ವೃದ್ಧಿಗೊಳಿಸಿ ಬಡ್ಡಿದರ ಇಳಿಸಲು ಅನುಕೂಲ ವಾತಾವರಣ ಮಾಡಿಕೊಡುವಂತೆ ಒತ್ತಾಯಿಸಿ ಉದ್ದಿಮೆಗಳು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಚಿದಂಬರಂ ಅವರನ್ನು ಭೇಟಿಯಾದ ಬೆನ್ನಲ್ಲೇ ಈ ಸಭೆಯು ನಡೆದಿದೆ.

ಎಸ್‌ಬಿಐ ಅಧ್ಯಕ್ಷ ಒ.ಪಿ.ಭಟ್, ಪಿಎನ್‌ಬಿ ಮುಖ್ಯಸ್ಥ ಕೆ.ಸಿ.ಚಕ್ರವರ್ತಿ, ಬ್ಯಾಂಕ್ ಆಫ್ ಬರೋಡಾ ಅಧ್ಯಕ್ಷ ಎಂ.ಡಿ.ಮಲ್ಯ, ಕೆನರಾ ಬ್ಯಾಂಕ್ ಮುಖ್ಯಸ್ಥ ಎ.ಸಿ.ಮಹಾಜನ್, ಯುಸಿಒ ಬ್ಯಾಂಕ್ ಸಿಎಂಡಿ ಎಸ್.ಕೆ.ಗೋಯಲ್ ಮತ್ತು ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐನಿಂದ ಬಡ್ಡಿದರ ಇಳಿಕೆ ಸಂಭವ
ಜಿಂದಾಲ್ ಸ್ಟೀಲ್ ಯೋಜನೆಗೆ ಮಮತಾ ಬೆಂಬಲ
ಶೀಘ್ರವೇ ಬಡ್ಡಿದರ ಪುನರ್ ವಿಮರ್ಶೆ: ಐಸಿಐಸಿಐ
ಉದ್ಯಮ ಸಮಸ್ಯೆ ನಿವಾರಣೆಗೆ ಉನ್ನತ ಸಮಿತಿ
ಪಶ್ಚಿಮ ಬಂಗಾಲದತ್ತ ಮಿತ್ತಲ್ ದೃಷ್ಟಿ
ಬ್ಯಾಂಕ್ ಠೇವಣಿ ಸುರಕ್ಷಿತ: ಪಿಎಂ ಭರವಸೆ