ಸ್ಪೈಸ್ ಮೊಬೈಲ್‌ನ ಮಾತೃಸಂಸ್ಥೆಯಾದ ಸ್ಪೈಸ್ ಕಾರ್ಪೋರೇಟ್ ಎಂಟರ್‌ಟೇನ್‌ಮೆಂಟ್ ಲಿಮಿಟೆಡ್‌ನ ಹೆಸರನ್ನು ಇದೀಗ ಬದಲಾಯಿಸಿ ಸ್ಪೈಸ್ ಎನ್ಫೋಟೈನ್‌ಮೆಂಟ್ ಲಿಮಿಟೆಡ್ ಆಗಿ ನಾಮಕರಣ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಅಕ್ಟೋಬರ್ 24 ರಿಂದ ಸ್ಪೈಸ್ ಎನ್ಫೋಟೈನ್‌ಮೆಂಟ್ ಲಿಮಿಟೆಡ್ ಎನ್ನುವ ನೂತನ ಹೆಸರು ಜಾರಿಗೆ ಬಂದಿದೆ ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಸ್ಪೈಸ್ ಎನ್ಫೋಟೈನ್‌ಮೆಂಟ್ ಲಿಮಿಟೆಡ್ ಕಂಪೆನಿ ಎಂಟರ್‌ಟೇನ್‌ಮೆಂಟ್‌ನ ವಿಡಿಯೋ, ವೈಸ್ ಮತ್ತು ಡಟಾ ಮತ್ತಿತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 2008ಕ್ಕೆ ಅಂತ್ಯಗೊಂಡಂತೆ ಸ್ಪೈಸ್ ಎನ್ಫೋಟೈನ್‌ಮೆಂಟ್ ಲಿಮಿಟೆಡ್ ಶೇ. 38.93 ಸ್ಪೈಸ್ ಮೊಬೈಲ್‌ನ ಶೇರುಪೇಟೆಯಲ್ಲಿ 2.90 ಈಕ್ವಿಟಿ ಶೇರುಗಳನ್ನು ಪ್ರತಿನಿಧಿಸುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |