ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತುರ್ಕಿ ಸಚಿವರೊಂದಿಗೆ ದೇವ್ರಾ ಚರ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುರ್ಕಿ ಸಚಿವರೊಂದಿಗೆ ದೇವ್ರಾ ಚರ್ಚೆ
ತುರ್ಕ್‌ಮನ್‌ಸ್ತಾನ್ ಪೆಟ್ರೋಲೀಯಂ ಸಚಿವ ಅನ್ನಾಗುಲಿ ಡೆರ್ರೆಯಾವ್ ಅವರೊಂದಿಗೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಉಭಯ ದೇಶಗಳ ಯೋಜಿತ ಮಧ್ಯ ಏಷ್ಯಾ ಮಾರ್ಗವಾಗಿ ಅಫಘಾನಿಸ್ತಾನ್‌ದಿಂದ ಪಾಕಿಸ್ತಾನ್ ಮೂಲಕ ಸಾಗುವ ಅನಿಲ ಕೊಳವೆ ಮಾರ್ಗ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಉಭಯ ಸಚಿವರು ಅಶ್‌ಹಾಬತ್ ನಗರದ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ತುರ್ಕ್‌ಮನ್‌ಸ್ತಾನ್ -ಅಫಘಾನಿಸ್ತಾನ್- ಪಾಕಿಸ್ತಾನ್ - ಭಾರತ ಮಾರ್ಗದ ಅನಿಲ ಕೊಳವೆ ಯೋಜನೆಯ ಅಭಿವೃದ್ಧಿ ಹಾಗೂ ಪಾಲುದಾರಿಕೆ ಕುರಿತಂತೆ ಚರ್ಚಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವ್ರಾ ಮಾಸ್ಕೊಗೆ ತೆರಳುತ್ತಿರುವ ಸಂದರ್ಭದಲ್ಲಿ ಸಚಿವ್ ಅನ್ನಾಗುಲೆ ಅವರ ವಿಶೇಷ ಅತಿಥಿಗಳಾಗಿ ತುರ್ಕ್‌ಮನ್‌ಸ್ತಾನ್ ನ ಅಶ್‌ಹಗಾಬತ್ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ನವದೆಹಲಿಯಲ್ಲಿ ಡಿಸೆಂಬರ್ 25 ಮತ್ತು 26 ರಂದು ನಡೆಯಲಿರುವ ಹೈಡ್ರೋಕಾರ್ಬನ್ಸ್ ಕುರಿತಂತೆ ಭಾರತ-ಸಿಐಎಸ್‌ ರೌಂಡ್‌ ಟೇಬಲ್ ಕಾನ್ಫ್‌ರೆನ್ಸ್‌ನಲ್ಲಿ ಪಾಲ್ಗೊಳ್ಳುವಂತೆ ವೈಯಕ್ತಿಕವಾಗಿ ತುರ್ಕ್‌ಮನ್‌ಸ್ತಾನ್ ಸಚಿವ ಅನ್ನಾಗುಲೆಯವರಿಗೆ ಸಚಿವ ದೇವ್ರಾ ಅಹ್ವಾನ ನೀಡಿದರು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದೇಶಿ ಬಂಡವಾಳ ನೀತಿಯಲ್ಲಿ ಸರಳತೆ: ನಾಥ್
ಸ್ಪೈಸ್ ಕಾರ್ಪೋರೇಟ್‌ ಹೆಸರು ಬದಲು
ನೋಕಿಯಾದಿಂದ ಉದ್ಯೋಗ ಕಡಿತ
ಬಡ್ಡಿದರ, ನಗದು ಹರಿವು ಕುರಿತಾಗಿ ಚಿದಂಬರಂ ಚರ್ಚೆ
ಎಸ್‌ಬಿಐನಿಂದ ಬಡ್ಡಿದರ ಇಳಿಕೆ ಸಂಭವ
ಜಿಂದಾಲ್ ಸ್ಟೀಲ್ ಯೋಜನೆಗೆ ಮಮತಾ ಬೆಂಬಲ