ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅರ್ಸೆಲ್‌ಮಿತ್ತಲ್‌ಗೆ ಶೇ. 29 ರಷ್ಟು ನಿವ್ವಳ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರ್ಸೆಲ್‌ಮಿತ್ತಲ್‌ಗೆ ಶೇ. 29 ರಷ್ಟು ನಿವ್ವಳ ಲಾಭ
ಜಗತ್ತಿನ ಬೃಹತ್ ಉಕ್ಕು ಉತ್ಪಾದನಾ ಕಂಪೆನಿಯಾದ ಅರ್ಸೆಲ್ ಮಿತ್ತಲ್, ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಉತ್ಪಾದನೆಯನ್ನು ಕಡಿತಗೊಳಿಸಿದ್ದರೂ ಸೆಪ್ಟೆಂಬರ್ 30ಕ್ಕೆ ತ್ರೈಮಾಸಿಕ ಅವಧಿ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.29 ರಷ್ಟು ಹೆಚ್ಚಳವಾಗಿ 3.8 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡಂತೆ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಬೇಡಿಕೆ ಇಳಿಮುಖವಾಗಿ ಹೆಚ್ಚುವರಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರಿಂದ ನಿವ್ವಳ ಆದಾಯದಲ್ಲಿ ಕಡಿಮೆಯಾಗಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಮೂರು ಬಿಲಿಯನ್ ಡಾಲರ್ ಲಾಭವಾಗಿತ್ತು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡಂತೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಉಕ್ಕು ಮಾರಾಟ ಶೇ. 38 ರಷ್ಟು ಹೆಚ್ಚಳವಾಗಿ 35.2 ಬಿಲಿಯನ್ ಡಾಲರ್‌ಗಳಾಗಿದೆ. ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ 25.5 ಬಿಲಿಯನ್ ಡಾಲರ್‌ಗಳಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪ್ರಸಕ್ತ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 8.6 ಬಿಲಿಯನ್ ಡಾಲರ್‌ಗಳಷ್ಟು ನಿವ್ವಳ ಲಾಭದ ಗುರಿಯನ್ನು ತಲುಪಿದೆ. ಸರಬರಾಜು ಮತ್ತು ಬೇಡಿಕೆ ಪೂರಕವಾಗುವವರೆಗೂ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅರ್ಸೆಲ್‌ಮಿತ್ತಲ್ ಕಂಪೆನಿಯ ಸಿಇಒ ಲಕ್ಷ್ಮಿ ಎನ್. ಮಿತ್ತಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತುರ್ಕಿ ಸಚಿವರೊಂದಿಗೆ ದೇವ್ರಾ ಚರ್ಚೆ
ವಿದೇಶಿ ಬಂಡವಾಳ ನೀತಿಯಲ್ಲಿ ಸರಳತೆ: ನಾಥ್
ಸ್ಪೈಸ್ ಕಾರ್ಪೋರೇಟ್‌ ಹೆಸರು ಬದಲು
ನೋಕಿಯಾದಿಂದ ಉದ್ಯೋಗ ಕಡಿತ
ಬಡ್ಡಿದರ, ನಗದು ಹರಿವು ಕುರಿತಾಗಿ ಚಿದಂಬರಂ ಚರ್ಚೆ
ಎಸ್‌ಬಿಐನಿಂದ ಬಡ್ಡಿದರ ಇಳಿಕೆ ಸಂಭವ