ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಬಿಕ್ಕಟ್ಟು : ಪಿಎಂ ನೇತೃತ್ವದಲ್ಲಿ ಸಮಿತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಬಿಕ್ಕಟ್ಟು : ಪಿಎಂ ನೇತೃತ್ವದಲ್ಲಿ ಸಮಿತಿ
ಜಾಗತಿಕ ಆರ್ಥಿಕ ಬಿಕ್ಕಟ್ಟು ಹಾಗೂ ಅದರಿಂದ ಭಾರತದ ಮೇಲಾಗುವ ಪರಿಣಾಮ ಕುರಿತಂತೆ ಗಮನ ನೀಡಲು ಪ್ರಧಾನಿಯವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.

ಸಮಿತಿಯಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ , ಕೈಗಾರಿಕೆ ಮತ್ತು ವಾಣಿಜ್ಯ ಖಾತೆ ಸಚಿವ ಕಮಲನಾಥ್, ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್ ಆಹ್ಲುವಾಲಿಯಾ ಮತ್ತು ಆರ್‌ಬಿಐ ಗವರ್ನರ್ ಡಿ.ಸುಬ್ಬಾರಾವ್ ಅವರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತ ಹಾಗೂ ಅದರಿಂದ ಭಾರತದ ಮೇಲಾಗುವ ಪರಿಣಾಮ ಕುರಿತಂತೆ ಕೈಗಾರಿಕೋದ್ಯಮ ಸಮಸ್ಯೆಗಳ ಕುರಿತಂತೆ ಶೀಘ್ರದಲ್ಲಿ ಕೇಂದ್ರ ಸರಕಾರದ ಗಮನಕ್ಕೆ ತರಲು ಸಮಿತಿ ಪ್ರತಿದಿನ ಸಭೆಯನ್ನು ನಡೆಸಿ ವರದಿಯನ್ನು ಪ್ರಧಾನಿಯವರಿಗೆ ರವಾನಿಸುತ್ತದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೈಗಾರಿಕೆ ಉದ್ಯಮಿಗಳೊಂದಿಗೆ ಸಭೆಯನ್ನು ನಡೆಸಿದ ನಂತರ ಸಮಿತಿಯನ್ನು ರಚಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅರ್ಸೆಲ್‌ಮಿತ್ತಲ್‌ಗೆ ಶೇ. 29 ರಷ್ಟು ನಿವ್ವಳ ಲಾಭ
ತುರ್ಕಿ ಸಚಿವರೊಂದಿಗೆ ದೇವ್ರಾ ಚರ್ಚೆ
ವಿದೇಶಿ ಬಂಡವಾಳ ನೀತಿಯಲ್ಲಿ ಸರಳತೆ: ನಾಥ್
ಸ್ಪೈಸ್ ಕಾರ್ಪೋರೇಟ್‌ ಹೆಸರು ಬದಲು
ನೋಕಿಯಾದಿಂದ ಉದ್ಯೋಗ ಕಡಿತ
ಬಡ್ಡಿದರ, ನಗದು ಹರಿವು ಕುರಿತಾಗಿ ಚಿದಂಬರಂ ಚರ್ಚೆ