ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ರೆಜಿಲ್‌ಗೆ ಚಿದಂಬರಂ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರೆಜಿಲ್‌ಗೆ ಚಿದಂಬರಂ ಭೇಟಿ
ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅಹ್ವಾನದ ಮೇರೆಗೆ ಜಿ-20 ರಾಷ್ಟ್ರಗಳ ಹಣಕಾಸು ಸಚಿವರುಗಳ ಸಭೆ ಸಾವ್‌ ಪೋಲೋ ನಗರದಲ್ಲಿ ನಡೆಯಲಿದ್ದು ವಿತ್ತ ಸಚಿವ ಪಿ.ಚಿದಂಬರಂ ಪಾಲ್ಗೊಳ್ಳಲು ಇಂದು ಬ್ರೆಜಿಲ್‌ಗೆ ತೆರಳಲಿದ್ದಾರೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ..

ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ರಿಸರ್ವ್‌ ಬ್ಯಾಂಕ್‌ ಗವರ್ನರ್‌‌ಗಳ ಹಾಗೂ ಹಣಕಾಸು ಸಚಿವರ ಸಭೆ ನವೆಂಬರ್ 8-9 ರಂದು ನಡೆಯಲಿದ್ದು, ಸಭೆಯಲ್ಲಿ ಭಾಗವಹಿಸಲು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಬ್ರೆಜಿಲ್‌ಗೆ ತೆರಳುತ್ತಿದ್ದಾರೆ.

ಅಮೆರಿಕ, ಇಂಗ್ಲೆಂಡ್, ರಷ್ಯಾ ಸೌದಿ ಅರೇಬಿಯಾ, ಆಸ್ಟ್ರೇಲಿಯಾ ದೇಶಗಳ ಹಣಕಾಸು ಸಚಿವರು ಜಾಗತಿಕ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಸೂಕ್ತ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಜಿ-20 ರಾಷ್ಟ್ರಗಳ ಹಣಕಾಸು ಸಚಿವರು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ಯಾಂಕ್‌ಗಳ ಬಡ್ಡಿ ದರ ಕಡಿತ
ಆರ್ಥಿಕ ಬಿಕ್ಕಟ್ಟು : ಪಿಎಂ ನೇತೃತ್ವದಲ್ಲಿ ಸಮಿತಿ
ಅರ್ಸೆಲ್‌ಮಿತ್ತಲ್‌ಗೆ ಶೇ. 29 ರಷ್ಟು ನಿವ್ವಳ ಲಾಭ
ತುರ್ಕಿ ಸಚಿವರೊಂದಿಗೆ ದೇವ್ರಾ ಚರ್ಚೆ
ವಿದೇಶಿ ಬಂಡವಾಳ ನೀತಿಯಲ್ಲಿ ಸರಳತೆ: ನಾಥ್
ಸ್ಪೈಸ್ ಕಾರ್ಪೋರೇಟ್‌ ಹೆಸರು ಬದಲು