ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐಗೆ ಶೇ.40ರಷ್ಟು ಲಾಭದ ನಿರೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐಗೆ ಶೇ.40ರಷ್ಟು ಲಾಭದ ನಿರೀಕ್ಷೆ
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯ ಮಧ್ಯೆಯು ಪ್ರಸಕ್ತ ಆರ್ಥಿಕ ವರ್ಷದ ದ್ವಿತಿಯಾರ್ಧದಲ್ಲಿ ಶೇ.40 ರಷ್ಟು ನಿವ್ವಳ ಲಾಭವನ್ನು ದೇಶದ ಪ್ರಮುಖ ಬ್ಯಾಂಕಾದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ನಿರೀಕ್ಷಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಆರ್ಥಿಕ ಸಾಲಿನ ದ್ವಿತಿಯಾರ್ಧದಲ್ಲಿ ನಿವ್ವಳ ಲಾಭ ಶೇ . 40ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಒ.ಪಿ. ಭಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜುಲೈನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಶೇ.40ರಷ್ಟು ಅಭಿವೃದ್ಧಿ ದರವನ್ನು ದಾಖಲಿಸಿ 2,260 ಕೋಟಿ ರೂ.ಗಳ ವಹಿವಾಟು ನಡೆಸಿದೆ. ವರ್ಷದ ಮೊದಲ ಆರು ತಿಂಗಳಲ್ಲಿ ಶೇ.28 ರಷ್ಟು ಏರಿಕೆಯಾಗಿ 3,900 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸಾಲ ವಿತರಣಾ ವಿಸ್ತರಣೆಯನ್ನು ಶೇ.26 ರಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಕಳೆದ ವರ್ಷ ಸಾಲ ವಿಸ್ತರಣೆ ಶೇ.23ರಷ್ಟಾಗಿತ್ತು ಎಂದು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಒ.ಪಿ. ಭಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರೆಜಿಲ್‌ಗೆ ಚಿದಂಬರಂ ಭೇಟಿ
ಬ್ಯಾಂಕ್‌ಗಳ ಬಡ್ಡಿ ದರ ಕಡಿತ
ಆರ್ಥಿಕ ಬಿಕ್ಕಟ್ಟು : ಪಿಎಂ ನೇತೃತ್ವದಲ್ಲಿ ಸಮಿತಿ
ಅರ್ಸೆಲ್‌ಮಿತ್ತಲ್‌ಗೆ ಶೇ. 29 ರಷ್ಟು ನಿವ್ವಳ ಲಾಭ
ತುರ್ಕಿ ಸಚಿವರೊಂದಿಗೆ ದೇವ್ರಾ ಚರ್ಚೆ
ವಿದೇಶಿ ಬಂಡವಾಳ ನೀತಿಯಲ್ಲಿ ಸರಳತೆ: ನಾಥ್