ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬೆಂಗಳೂರು : ಟೊಯೊಟಾದಿಂದ ಎರಡನೇ ಘಟಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು : ಟೊಯೊಟಾದಿಂದ ಎರಡನೇ ಘಟಕ
ನವದೆಹಲಿ : ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾರುಗಳ ಬೇಡಿಕೆ ಕುಸಿತದ ಮಧ್ಯೆಯು ಜಪಾನ್‌ನ ಪ್ರಮುಖ ಅಟೋಮೊಬೈಲ್ ಸಂಸ್ಥೆ ಟೊಯೊಟಾ ಬೆಂಗಳೂರಿನಲ್ಲಿ ಎರಡನೇ ಘಟಕವನ್ನು ಸ್ಥಾಪಿಸಲು 3200 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಘಟಕದಲ್ಲಿ ಉತ್ಪಾದನೆಗೆ ಅಗತ್ಯವಿರುವ ಸಾಮಾನ್ಯ ಉಪಕರಣ ಹಾಗೂ ವಿಶೇಷ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳ ಖರೀದಿಗೆ ಹೆಚ್ಚುವರಿಯಾಗಿ 1,553 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 1650 ಕೋಟಿ ವೆಚ್ಚದ ಎರಡನೇ ಘಟಕದಲ್ಲಿ ಸಣ್ಣಕಾರುಗಳನ್ನು ತಯಾರಿಸಲಾಗುವುದು, ಮುಂಬರುವ 2010-11 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರು ರೂಪಾಯಿ ಕುಸಿತ
ಎಸ್‌ಬಿಐಗೆ ಶೇ.40ರಷ್ಟು ಲಾಭದ ನಿರೀಕ್ಷೆ
ಬ್ರೆಜಿಲ್‌ಗೆ ಚಿದಂಬರಂ ಭೇಟಿ
ಬ್ಯಾಂಕ್‌ಗಳ ಬಡ್ಡಿ ದರ ಕಡಿತ
ಆರ್ಥಿಕ ಬಿಕ್ಕಟ್ಟು : ಪಿಎಂ ನೇತೃತ್ವದಲ್ಲಿ ಸಮಿತಿ
ಅರ್ಸೆಲ್‌ಮಿತ್ತಲ್‌ಗೆ ಶೇ. 29 ರಷ್ಟು ನಿವ್ವಳ ಲಾಭ