ದೇಶದ ನಂಬರ್ ಒನ್ ಸ್ಥಾನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಎಸ್‌ಬಿಐ ಮೊದಲಿದ್ದ ಶೇ.13.75 ರಷ್ಟು ಬಡ್ಡಿ ದರವನ್ನು ಶೇ.13ಕ್ಕೆ ಇಳಿಸಲಾಗಿದೆ ಎಂದು ಬ್ಯಾಂಕ್‌ನ ಮುಖ್ಯಸ್ಥ ಒ.ಪಿ.ಭಟ್ ಹೇಳಿದ್ದಾರೆ.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ,ಯೂನಿಯನ್ ಬ್ಯಾಂಕ್ ,ಯುಕೋ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‌ಗಳು ಈಗಾಗಲೇ ಬಡ್ಡಿ ದರವನ್ನು ಕಡಿತಗೊಳಿಸಿವೆ
ಮಂಗಳವಾರದಂದು ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ನಡೆಸಿದ ಮಾತಕತೆ ಸಂದರ್ಭದಲ್ಲಿ ಬಡ್ಡಿ ದರವನ್ನು ಕಡಿತಗೊಳಿಸುವುದಾಗಿ ಬ್ಯಾಂಕ್‌ಗಳು ಭರವಸೆಯನ್ನು ನೀಡಿದ್ದವು. ಅದರಂತೆ ಬಡ್ಡಿ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. |