ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಶೇ.10.72ರಷ್ಟು ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.10.72ರಷ್ಟು ಏರಿಕೆ
ಕಳೆದ ವಾರ ಶೇ.10.68ರಷ್ಟಿದ್ದ ಹಣದುಬ್ಬರ ಅಕ್ಟೋಬರ್ 25ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ.10.72 ರಷ್ಟು ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.

ಸಗಟು ದರಗಳ ಚಲನೆಯಿಂದಾಗಿ ವಾರ್ಷಿಕ ಹಣದುಬ್ಬರ ದರವನ್ನು ನಿರ್ಧರಿಸಲಾಗುತ್ತಿದ್ದು ಕಳೆದ ವಾರ ಶೇ.10.68 ರಷ್ಟಾಗಿತ್ತು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸತತ ಐದು ವಾರಗಳ ನಿರಂತರ ಇಳಿಕೆಯನ್ನು ಕಂಡಿದ್ದ ಹಣದುಬ್ಬರ. ಪ್ರಸಕ್ತ ವಾರದ ಹಣದುಬ್ಬರದ ಏರಿಕೆಯಿಂದಾಗಿ ಉತ್ಪಾದನಾ ಕ್ಷೇತ್ರದ ವಸ್ತುಗಳ ದರ ಏರಿಕೆಗೆ ಕಾರಣವಾಗಲಿದೆ ಎಂದು ಮೂಲಗಳು ತಿಳಿಸಿವೆ.

ದ್ವಿಚಕ್ರವಾಹನ ಹಾಗೂ ಅಟೋರಿಕ್ಷಾ ಸೇರಿದಂತೆ ಅಟೋಮೊಬೈಲ್ ವಸ್ತುಗಳ ದರಗಳಲ್ಲಿ ಕಳೆದ ವಾರ ಹೆಚ್ಚಳವಾಗಿತ್ತು. ಸಿಮೆಂಟ್, ಸ್ಟೀಲ್ ಮತ್ತು ಇಂಧನ ದರಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.

ಅಗಸ್ಟ್ 30ಕ್ಕೆ ವಾರಂತ್ಯಗೊಂಡಂತೆ ಶೇ.12.38ರಷ್ಟಿದ್ದ ಪರಿಶೋಧಿತ ಹಣದುಬ್ಬರ, ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಶೇ.12.10 ರಷ್ಟಾಗಿತ್ತು ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐ: ಶೇ. 0.75ರಷ್ಟು ಬಡ್ಡಿ ದರ ಕಡಿತ
ಬೆಂಗಳೂರು : ಟೊಯೊಟಾದಿಂದ ಎರಡನೇ ಘಟಕ
ಡಾಲರ್ ಎದುರು ರೂಪಾಯಿ ಕುಸಿತ
ಎಸ್‌ಬಿಐಗೆ ಶೇ.40ರಷ್ಟು ಲಾಭದ ನಿರೀಕ್ಷೆ
ಬ್ರೆಜಿಲ್‌ಗೆ ಚಿದಂಬರಂ ಭೇಟಿ
ಬ್ಯಾಂಕ್‌ಗಳ ಬಡ್ಡಿ ದರ ಕಡಿತ