ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಕೇಂದ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಕೇಂದ್ರ
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕುಸಿದಿದ್ದರೂ, ದೇಶದಲ್ಲಿ ಇಂಧನ ಬೆಲೆ ಕಡಿತ ಮಾಡುವ ಸಾಧ್ಯತೆಗಳಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಡೀಸೆಲ್, ಸೀಮೆಣ್ಣೆ ಮತ್ತು ಅಡುಗೆ ಅನಿಲ ಮಾರಾಟದಲ್ಲಿ ತೈಲ ಕಂಪನಿಗಳು ಇನ್ನೂ ನಷ್ಟವನ್ನೇ ಅನುಭವಿಸುತ್ತಿದೆ ಎಂಬುದು ಸರಕಾರ ಇದಕ್ಕೆ ನೀಡಿರುವ ಕಾರಣ.

"ಇಂಧನ ಬೆಲೆಯಲ್ಲಿ ಕಡಿತ ಮಾಡುವ ವಿಷಯ ನನಗೆ ಗೊತ್ತಿಲ್ಲ... ಸದ್ಯಕ್ಕೆ ಬೆಲೆ ಕಡಿತಗೊಳಿಸುವ ಯಾವುದೇ ಪ್ರಸ್ತಾಪಗಳೂ ಇಲ್ಲ" ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೆಟ್ರೋಲ್ ಮಾರಾಟದ ಲಾಭಾಂಶವು ಧನಾತ್ಮಕವಾಗಿ ಬದಲಾಗಿದೆ. ಆದರೆ ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಮಾರಾಟದ ನಷ್ಟವನ್ನು ಸರಿದೂಗಿಸಬೇಕಿದೆ ಎಂದು ಅವರು ಹೇಳಿದರು.

ಮಾತ್ರವಲ್ಲದೆ, ರೂಪಾಯಿ-ಡಾಲರ್ ಬೆಲೆ ಹಾಗೂ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿನ ದೈನಂದಿನ ಏರುಪೇರುಗಳು ಕೂಡ ನಡೆಯುತ್ತಿದೆ ಎಂದವರು ಗಮನ ಸೆಳೆದರು.

ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳು ಈ ಹಣಕಾಸು ವರ್ಷದಲ್ಲಿ 1,28,135 ಕೋಟಿ ರೂ. ನಷ್ಟ ಹೊಂದಲಿವೆ ಎಂದು ಅಂದಾಜಿಸಲಾಗಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಐಒಸಿ, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ಗಳು 92,853 ಕೋಟಿ ರೂ. ನಷ್ಟ ಅನುಭವಿಸಿದ್ದು, ಈ ಹಣಕಾಸು ವರ್ಷದ ಉತ್ತರಾರ್ಧದಲ್ಲಿ ನಷ್ಟದ ಪ್ರಮಾಣವು 35,282 ಕೋಟಿ ರೂ.ಗೆ ಇಳಿಯುವ ಸಾಧ್ಯತೆಗಳನ್ನು ಲೆಕ್ಕಾಚಾರ ಹಾಕಲಾಗಿದೆ.

12 ತಿಂಗಳಲ್ಲಿ ಮೊದಲ ಬಾರಿಗೆ ತೈಲ ಕಂಪನಿಗಳು ಪೆಟ್ರೋಲ್ ಮಾರಾಟದಿಂದ ಲಾಭ ಗಳಿಸತೊಡಗಿವೆ. ಆದರೆ ಡೀಸೆಲ್, ಎಲ್‌ಪಿಜಿ ಮತ್ತು ಸೀಮೆಣ್ಣೆ ಮಾರಾಟದಲ್ಲಿ ಅವು ದಿನಕ್ಕೆ 255 ಕೋಟಿ ರೂ.ಗಳಷ್ಟು ನಷ್ಟ ಎದುರಿಸುತ್ತಿವೆ ಎಂದು ಅಂದಾಜಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಶೇ.10.72ರಷ್ಟು ಏರಿಕೆ
ಎಸ್‌ಬಿಐ: ಶೇ. 0.75ರಷ್ಟು ಬಡ್ಡಿ ದರ ಕಡಿತ
ಬೆಂಗಳೂರು : ಟೊಯೊಟಾದಿಂದ ಎರಡನೇ ಘಟಕ
ಡಾಲರ್ ಎದುರು ರೂಪಾಯಿ ಕುಸಿತ
ಎಸ್‌ಬಿಐಗೆ ಶೇ.40ರಷ್ಟು ಲಾಭದ ನಿರೀಕ್ಷೆ
ಬ್ರೆಜಿಲ್‌ಗೆ ಚಿದಂಬರಂ ಭೇಟಿ