ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ-ಕೋರಸ್‌ನಿಂದ 400 ನೌಕರರ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ-ಕೋರಸ್‌ನಿಂದ 400 ನೌಕರರ ವಜಾ
ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪ್ರತಿಷ್ಠಿತ ಕಂಪೆನಿಗಳ ಡೋಲಾಯಮಾನ ಸ್ಥಿತಿ ಮುಂದುವರಿದಿರುವಂತೆಯೇ, ಇದೀಗ ಟಾಟಾ ಮಾಲೀಕತ್ವದ ಕೋರಸ್ ಕಂಪೆನಿ 400 ನೌಕರರ ಉದ್ಯೋಗವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

ಜಾಗತಿಕವಾಗಿ ಆರ್ಥಿಕ ಕುಸಿತದ ಬಿಸಿ ತಟ್ಟಿರುವ ಹಿನ್ನೆಲೆಯಲ್ಲಿ ಪಶ್ಚಿಮ ಮಿಡ್‌ಲ್ಯಾಂಡ್ ಸೇರಿದಂತೆ ಬ್ರಿಟನ್‌ನಲ್ಲಿ 100, ಉತ್ತರ ವಾಲ್ಸೆಯಲ್ಲಿ 100, ದಕ್ಷಿಣ ವಾಲ್ಸೆಯಲ್ಲಿ 50 ಹಾಗೂ ಲೀಡ್ಸ್‌ನಲ್ಲಿ 50 ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಕೋರಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಸ್ಟೀಲ್ ವಹಿವಾಟಿಗೆ ಹೆಚ್ಚಿನ ಹೊಡೆತ ಉಂಟಾಗಿದ್ದರಿಂದ ಈ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟನೆ ನೀಡಿದೆ.

ಆ ನಿಟ್ಟಿನಲ್ಲಿ ಖರ್ಚನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಾರಿಗೆ, ಇಂಧನ ಸೇರಿದಂತೆ ಹಲವು ನೆಲೆಗಳಲ್ಲಿ ಬಿಗು ಕ್ರಮ ಕೈಗೊಳ್ಳುವ ಮೂಲಕ ನಷ್ಟವನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಂಪೆನಿ ವಿವರಿಸಿದೆ.

ಬ್ರಿಟನ್ ಮತ್ತು ಐಯರ್ಲ್ಯಾಂಡ್‌ಗಳಲ್ಲಿ ಸುಮಾರು 36 ಪ್ರದೇಶಗಳಲ್ಲಿರುವ ಕೋರಸ್ ಕಂಪೆನಿಯಲ್ಲಿ ಒಟ್ಟು 2,400ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಾಹೂ ಖರೀದಿ ಮುಗಿದ ಅಧ್ಯಾಯ: ಮೈಕ್ರೋಸಾಫ್ಟ್
ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಕೇಂದ್ರ
ಹಣದುಬ್ಬರ ಶೇ.10.72ರಷ್ಟು ಏರಿಕೆ
ಎಸ್‌ಬಿಐ: ಶೇ. 0.75ರಷ್ಟು ಬಡ್ಡಿ ದರ ಕಡಿತ
ಬೆಂಗಳೂರು : ಟೊಯೊಟಾದಿಂದ ಎರಡನೇ ಘಟಕ
ಡಾಲರ್ ಎದುರು ರೂಪಾಯಿ ಕುಸಿತ