ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಟಿಯಲ್ಲಿ 20ಶತಕೋಟಿ ವಹಿವಾಟು ಗುರಿ: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಟಿಯಲ್ಲಿ 20ಶತಕೋಟಿ ವಹಿವಾಟು ಗುರಿ: ಯಡಿಯೂರಪ್ಪ
ಮುಂದಿನ ವರ್ಷದಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಫ್ತು ವಹಿವಾಟು 20 ಶತಕೋಟಿ ಡಾಲರ್ ಗುರಿ ಹೊಂದಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಐಟಿಬಿಟಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಒಟ್ಟಾರೆ 60 ಶತಕೋಟಿ ಡಾಲರ್ ಆಗಿದ್ದು, ರಾಜ್ಯದಲ್ಲಿಯೇ ಸುಮಾರು 20 ಶತಕೋಟಿ ಡಾಲರ್ ಗುರಿ ಹೊಂದಿರುವುದಾಗಿ ಹೇಳಿದರು.

ಪ್ರಸ್ತುತ ಸನ್ನಿವೇಶದಲ್ಲಿ ಆರ್ಥಿಕ ಬಿಕ್ಕಟ್ಟು ಕಂಡುಬಂದರೂ, ರಾಜ್ಯದ ಐಟಿ ಬಿಟಿ ರಫ್ತಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ತಿಳಿಸಿದ ಮುಖ್ಯಮಂತ್ರಿ, ಈ ನಿಟ್ಟಿನಲ್ಲಿ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ನೀಡಲು ಬದ್ಧವಾಗಿದೆ ಎಂದು ಹೇಳಿದರು.

ಐಟಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಮುಂದಿನ ಜನವರಿಯಲ್ಲಿ ಗುಜರಾತ್‌ನಲ್ಲಿ ಬಂಡವಾಳ ಹೂಡಿಕೆದಾರರ ಅಂತಾರಾಷ್ಟ್ರೀಯ ಸಮಾವೇಶ ಮಾಡುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ-ಕೋರಸ್‌ನಿಂದ 400 ನೌಕರರ ವಜಾ
ಯಾಹೂ ಖರೀದಿ ಮುಗಿದ ಅಧ್ಯಾಯ: ಮೈಕ್ರೋಸಾಫ್ಟ್
ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಕೇಂದ್ರ
ಹಣದುಬ್ಬರ ಶೇ.10.72ರಷ್ಟು ಏರಿಕೆ
ಎಸ್‌ಬಿಐ: ಶೇ. 0.75ರಷ್ಟು ಬಡ್ಡಿ ದರ ಕಡಿತ
ಬೆಂಗಳೂರು : ಟೊಯೊಟಾದಿಂದ ಎರಡನೇ ಘಟಕ