ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೆಚ್ಚುವರಿ ಸ್ಪೆಕ್ಟ್ರಂಗೆ ಏಕಕಾಲಿಕ ಮೇಲ್ತೆರಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಚ್ಚುವರಿ ಸ್ಪೆಕ್ಟ್ರಂಗೆ ಏಕಕಾಲಿಕ ಮೇಲ್ತೆರಿಗೆ
ಹೆಚ್ಚುವರಿ ಸ್ಪೆಕ್ಟ್ರಂಗಾಗಿ ಕೇಂದ್ರವು 4000 ಕೋಟಿ ರೂ.ಗಳ ಏಕಕಾಲಿಕ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಟೆಲಿಕಾಂ ಸಚಿವ ಎ.ರಾಜ ತಿಳಿಸಿದ್ದಾರೆ.

6.2 Mhz ಮೀರುವ ಸ್ಪೆಕ್ಟ್ರಂಗಳಿಗೆ ಏಕಕಾಲಿಕ ಶುಲ್ಕ ವಿಧಿಸುವ ಕುರಿತು ಟೆಲಿಕಾಂ ಆಯೋಗವು ಮುಂದಿನ ವಾರ ಸಭೆ ಸೇರಿ ನಿರ್ಧರಿಸಲಿದೆ. ಅದು 4 ಸಾವಿರ ಕೋಟಿ ರೂ.ಗಳಷ್ಟಿರಬಹುದು. ಹೆಚ್ಚುವರಿ ತರಂಗಗಳ ಬಳಕೆಗಾಗಿ ಮೊಬೈಲ್ ಆಪರೇಟರ್‌ಗಳ ಕಂದಾಯದ ಶುಲ್ಕವನ್ನು ಶೇ.1ರಿಂದ 2ರಷ್ಟು ಏರಿಸುವ ಸಾಧ್ಯತೆಗಳ ಬಗ್ಗೆಯೂ ಆಯೋಗವು ಚರ್ಚಿಸಲಿದೆ. ಒಟ್ಟಿನಲ್ಲಿ ಸ್ಪೆಕ್ಟ್ರಂ ಶುಲ್ಕಗಳ ಏರಿಕೆಯಿಂದ ಸರಕಾರವು 5000 ಕೋಟಿ ರೂ.ಗಳ ಹೆಚ್ಚುವರಿ ಆದಾಯ ನಿರೀಕ್ಷಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶುಲ್ಕ ಏರಿಕೆಯನ್ನು ಯಾವಾಗ ಜಾರಿಗೊಳಿಸುವುದು ಎಂಬುದರ ಬಗ್ಗೆ ಆಯೋಗ ನಿರ್ಧರಿಸಲಿದೆ. 8 Mhz ಸ್ಪೆಕ್ಟ್ರಂ ಬಳಸುವ ಟೆಲಿಕಾಂ ಕಂಪನಿಗಳ ನಿವ್ವಳ ಆದಾಯದ ಶೇ.1 ಹಾಗೂ 10 Mhz ಸ್ಪೆಕ್ಟ್ರಂ ಬಳಸುವ ಕಂಪನಿಗಳ ನಿವ್ವಳ ಆದಾಯದ ಶೇ.2 ಶುಲ್ಕವನ್ನು ವಿಧಿಸಲಾಗುತ್ತದೆ. ಇವುಗಳು ಪ್ರಮುಖ ಸಂಸ್ಥೆ ಭಾರತಿ ಏರ್‌ಟೆಲ್ ಮತ್ತು ರಿಲಯನ್ಸ್ ಹಾಗೂ ಐಡಿಯಾ ಸೆಲ್ಯುಲಾರ್ ಸೇರಿದಂತೆ ಎಲ್ಲ ಪ್ರಮುಖ ಟೆಲಿಕಾಂ ಆಪರೇಟರುಗಳ ಮೇಲೂ ಪರಿಣಾಮ ಬೀರುತ್ತವೆ.

ಟೆಲಿಕಾಂ ನಿಯಂತ್ರಣ ಮಂಡಳಿಯ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿರುವುದಾಗಿ ಸಚಿವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಐಟಿಯಲ್ಲಿ 20ಶತಕೋಟಿ ವಹಿವಾಟು ಗುರಿ: ಯಡಿಯೂರಪ್ಪ
ಟಾಟಾ-ಕೋರಸ್‌ನಿಂದ 400 ನೌಕರರ ವಜಾ
ಯಾಹೂ ಖರೀದಿ ಮುಗಿದ ಅಧ್ಯಾಯ: ಮೈಕ್ರೋಸಾಫ್ಟ್
ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಕೇಂದ್ರ
ಹಣದುಬ್ಬರ ಶೇ.10.72ರಷ್ಟು ಏರಿಕೆ