ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉದ್ಯೋಗ, ವೇತನ ಕಡಿತ ತಡೆ: ಸಿಪಿಎಂ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯೋಗ, ವೇತನ ಕಡಿತ ತಡೆ: ಸಿಪಿಎಂ ಒತ್ತಾಯ
ಜಾಗತಿಕ ಆರ್ಥಿಕ ಕುಸಿತದ ಪರಿಣಾಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಕ್ರಮಗಳನ್ನು 'ನಿರಾಶಾದಾಯಕ' ಎಂದು ಬಣ್ಣಿಸಿರುವ ಸಿಪಿಎಂ, ಉದ್ಯೋಗ ಮತ್ತು ವೇತನ ಕಡಿತ ನಿಲ್ಲಿಸಬೇಕು ಮತ್ತು ಜನರ ಖರೀದಿ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಇಳಿಸಬೇಕು ಎಂದು ಒತ್ತಾಯಿಸಿದೆ.

ಸಂಘಟಿತ ವಲಯದಲ್ಲಿ ಉದ್ಯೋಗ ಅಥವಾ ವೇತನ ಕಡಿತವು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳಿರುವುದರಿಂದ ರಾಷ್ಟ್ರದ ಆರ್ಥಿಕತೆಯ ಹಿತದೃಷ್ಟಿಯಿಂದ ಅವುಗಳ ತಡೆಗೆ ಸರಕಾರ ಆದೇಶ ಹೊರಡಿಸಬೇಕು ಎಂದು ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯ ಸೀತಾರಾಮ ಯೆಚೂರಿ ಅವರು ಹೇಳಿದರು. ಜಾಗತಿಕ ಬಿಕ್ಕಟ್ಟಿನ ಪ್ರಭಾವವನ್ನು ಸರಿದೂಗಿಸುವ ನಿಟ್ಟಿನಲ್ಲಿ ಅವರು 10 ಅಂಶಗಳ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಜಾಗತಿಕ ಹಣಕಾಸು ಬಿಕ್ಕಟ್ಟು ಭಾರತದ ಮೇಲೆ ಬೀರುವ ಋಣಾತ್ಮಕ ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಯುಪಿಎ ಸರಕಾರದ ಪ್ರತಿಕ್ರಿಯೆಯು 'ತೀವ್ರ ನಿರಾಶಾಜನಕವಾಗಿದೆ' ಎಂದು ಬಣ್ಣಿಸಿದ ಅವರು, ಪ್ರಸಕ್ತ ಬಿಕ್ಕಟ್ಟಿನ ಮೂಲ ಕಾರಣ ಅರಿಯುವಲ್ಲಿ ಸರಕಾರಕ್ಕಿರುವ ತಿಳಿವಳಿಕೆಯ ಕೊರತೆಯು ಎದ್ದುಕಾಣುತ್ತಿದೆ ಎಂದು ಯಚೂರಿ ಹೇಳಿದರು.

ಹಣಕಾಸು ಹರಿವು ಹೆಚ್ಚಳ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅವರು, ಜನರ ಖರೀದಿ ಸಾಮರ್ಥ್ಯ ಹೆಚ್ಚಳಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಹೊರತು ಈ ಬಗೆಗಿನ ಯಾವುದೇ ಪ್ರಯತ್ನಗಳು ಫಲದಾಯಕವಾಗಲಾರವು ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೆಚ್ಚುವರಿ ಸ್ಪೆಕ್ಟ್ರಂಗೆ ಏಕಕಾಲಿಕ ಮೇಲ್ತೆರಿಗೆ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಐಟಿಯಲ್ಲಿ 20ಶತಕೋಟಿ ವಹಿವಾಟು ಗುರಿ: ಯಡಿಯೂರಪ್ಪ
ಟಾಟಾ-ಕೋರಸ್‌ನಿಂದ 400 ನೌಕರರ ವಜಾ
ಯಾಹೂ ಖರೀದಿ ಮುಗಿದ ಅಧ್ಯಾಯ: ಮೈಕ್ರೋಸಾಫ್ಟ್
ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಕೇಂದ್ರ