ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಪೆಕ್ಟ್ರಂ ಅವ್ಯವಹಾರ: ಸಾಬೀತಾದರೆ ಪದತ್ಯಾಗಕ್ಕೆ ರಾಜ ಸಿದ್ಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಪೆಕ್ಟ್ರಂ ಅವ್ಯವಹಾರ: ಸಾಬೀತಾದರೆ ಪದತ್ಯಾಗಕ್ಕೆ ರಾಜ ಸಿದ್ಧ
ಸ್ಪೆಕ್ಟ್ರಂ ವಿತರಣೆಯಲ್ಲಿ 51,000 ಕೋಟಿ ರೂ. ಮೊತ್ತದ ಅವ್ಯವಹಾರಕ್ಕೆ ಕಾರಣ ತಾನು ಎಂಬ ಎಡಪಕ್ಷಗಳ ಆರೋಪಗಳು ಸಾಬೀತಾದರೆ ಪದತ್ಯಾಗ ಮಾಡುವುದಾಗಿ ಕೇಂದ್ರ ದೂರಸಂವಹನ ಖಾತೆ ಸಚಿವ ಎ.ರಾಜ ಹೇಳಿದ್ದಾರೆ.

ಟೆಲಿಕಾಂ ಇಲಾಖೆ ಅಧಿಕಾರಿಗಳೂ ಸೇರಿದ್ದ, ಅವಸರವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ರಾಜ ಈ ವಿಷಯ ಹೇಳಿದರು. ಜನವರಿ 10ರಂದು 9 ಸಾವಿರ ಕೋಟಿ ರೂ. ಮೌಲ್ಯದ 2ಜಿ ಟೆಲಿಕಾಂ ಪರವಾನಗಿ ವಿತರಣೆಗೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಇದು ನಿಗದಿತ ಬೆಲೆಗಿಂತ ಕಡಿಮೆಯಾಗಿದ್ದು, ಈ ಅವ್ಯವಹಾರದಲ್ಲಿ ಸರಕಾರಿ ಬೊಕ್ಕಸಕ್ಕೆ 51 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿತ್ತು.

ಇತ್ತೀಚೆಗೆ ಸ್ಪೆಕ್ಟ್ರಂನಲ್ಲಿ ಅನುಕ್ರಮವಾಗಿ 1537 ಕೋಟಿ ಹಾಗೂ 1651 ಕೋಟಿ ರೂ. ಹೂಡಿಕೆ ಮಾಡಿದ್ದ ಸ್ವಾನ್ ಮತ್ತು ಯುನಿಟೆಕ್ ಕಂಪನಿಗಳು, 9400 ಕೋಟಿ ಹಾಗೂ 11620 ಕೋಟಿ ರೂ. ಮೊತ್ತದ ಔದ್ಯಮಿಕ ಮೌಲ್ಯನಿರ್ಣಯಗಳನ್ನು ಪಡೆದಿದ್ದವು. ಅವರ ಬಳಿ ಟೆಲಿಕಾಂ ಮೂಲಸೌಕರ್ಯಗಳು, ನಗದು ಹರಿವು ಅಥವಾ ಗ್ರಾಹಕರು ಇಲ್ಲದಿದ್ದರೂ ಇಷ್ಟು ಮೊತ್ತದ ಮೌಲ್ಯ ನಿರ್ಣಯ ಗಳಿಸಿರುವುದು ಹುಬ್ಬೇರಿಸಿತ್ತು.

1999ರ ರಾಷ್ಟ್ರೀಯ ಟೆಲಿಕಾಂ ನೀತಿ ಮತ್ತು ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು 2007ರ ಆಗಸ್ಟ್ 2007ರ ಶಿಫಾರಸುಗಳ ಹಿನ್ನೆಲೆಯಲ್ಲಿ ಇದನ್ನು ತಡೆಹಿಡಿಯುವ ಬದಲು, "ಮೊದಲು ಬಂದವರಿಗೆ ಆದ್ಯತೆ" ಆಧಾರದಲ್ಲಿ ಪರವಾನಗಿ ನೀಡಲಾಗಿದೆ ಎಂಬುದು ರಾಜ ಅವರ ವಾದ.

2001ರ ಸ್ಪೆಕ್ಟ್ರಂ ಯಶಸ್ವಿ ಹರಾಜು ಪ್ರಕ್ರಿಯೆಯನ್ನು ಕಡೆಗಣಿಸಿದ್ದೇಕೆ ಎಂದು ಕೇಳಿದಾಗ, '2001ರಲ್ಲಿ ಯಾವುದೇ ಹರಾಜು ನಡೆದಿದೆ ಎಂದು ನನಗನಿಸುವುದಿಲ್ಲ' ಎಂದಷ್ಟೇ ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನರಲ್ ಮೋಟರ್ಸ್: 3600 ನೌಕರರಿಗೆ ಗೇಟ್‌ಪಾಸ್ ನಿರ್ಧಾರ
ಉದ್ಯೋಗ, ವೇತನ ಕಡಿತ ತಡೆ: ಸಿಪಿಎಂ ಒತ್ತಾಯ
ಹೆಚ್ಚುವರಿ ಸ್ಪೆಕ್ಟ್ರಂಗೆ ಏಕಕಾಲಿಕ ಮೇಲ್ತೆರಿಗೆ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಐಟಿಯಲ್ಲಿ 20ಶತಕೋಟಿ ವಹಿವಾಟು ಗುರಿ: ಯಡಿಯೂರಪ್ಪ
ಟಾಟಾ-ಕೋರಸ್‌ನಿಂದ 400 ನೌಕರರ ವಜಾ