ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್: ಕನಿಷ್ಠ 25 ವಿದೇಶೀ ಪೈಲಟ್‌ಗಳು ಮನೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್: ಕನಿಷ್ಠ 25 ವಿದೇಶೀ ಪೈಲಟ್‌ಗಳು ಮನೆಗೆ
ಹಣಕಾಸು ಬಿಕ್ಕಟ್ಟು ಹಿನ್ನೆಲೆಯಲ್ಲಿ ಹೆಚ್ಚುತ್ತಲೇ ಇರುವ ನಷ್ಟವನ್ನು ಸರಿದೂಗಿಸಲು ಹೆಣಗಾಡುತ್ತಿರುವ ಜೆಟ್ ಏರ್‌ವೇಸ್, ಬೋಯಿಂಗ್ 737 ವಿಮಾನದ ಕ್ಯಾಪ್ಟನ್ ಸೇರಿದಂತೆ ಕನಿಷ್ಠ 25 ಮಂದಿ ವಿದೇಶೀ ಪೈಲಟ್‌ಗಳನ್ನು ವಜಾ ಮಾಡಿದೆ ಎಂದು ಜೆಟ್ ವಕ್ತಾರರು ತಿಳಿಸಿದ್ದಾರೆ.

ತಿಂಗಳಿಗೆ 15,000ದಿಂದ 18,000 ಡಾಲರ್‌ನಷ್ಟು ವೇತನ, ಪಂಚ ತಾರಾ ಹೋಟೆಲ್ ವಸತಿ ಮತ್ತು ತವರೂರಿಗೆ ಉಚಿತ ವಿಮಾನ ಯಾನ ಮುಂತಾದ ಪುಷ್ಕಳ ಸೌಲಭ್ಯವನ್ನು ಈ ಪೈಲಟ್‌ಗಳು ಪಡೆಯುತ್ತಿದ್ದರು.

ಈ ಮೊದಲು, ದೀಪಾವಳಿ ಹಬ್ಬದ ದಿನಗಳ ಆಸುಪಾಸಿನಲ್ಲಿ ಜೆಟ್ ಕಂಪನಿಯು ಸುಮಾರು 400ರಷ್ಟು ನೌಕರರನ್ನು ವಜಾಗೊಳಿಸಿತ್ತು. ಆದರೆ ದೇಶಾದ್ಯಂತ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಅವರನ್ನೆಲ್ಲಾ ಮರಳಿ ಕೆಲಸಕ್ಕೆ ಸೇರಿಸಿಕೊಂಡಿತ್ತು.

ಇದಲ್ಲದೆ, ವೆಚ್ಚ ನಿಯಂತ್ರಣ ಕ್ರಮದ ಅಂಗವಾಗಿ ಮತ್ತೊಂದು ವಿಮಾನ ಯಾನ ಸಂಸ್ಥೆ, ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್, ಕಳೆದ ತಿಂಗಳು ತರಬೇತಿ ಪೈಲಟ್‌ಗಳ ವೇತನಕ್ಕೆ ಕತ್ತರಿ ಹಾಕಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಪೆಕ್ಟ್ರಂ ಅವ್ಯವಹಾರ: ಸಾಬೀತಾದರೆ ಪದತ್ಯಾಗಕ್ಕೆ ರಾಜ ಸಿದ್ಧ
ಜನರಲ್ ಮೋಟರ್ಸ್: 3600 ನೌಕರರಿಗೆ ಗೇಟ್‌ಪಾಸ್ ನಿರ್ಧಾರ
ಉದ್ಯೋಗ, ವೇತನ ಕಡಿತ ತಡೆ: ಸಿಪಿಎಂ ಒತ್ತಾಯ
ಹೆಚ್ಚುವರಿ ಸ್ಪೆಕ್ಟ್ರಂಗೆ ಏಕಕಾಲಿಕ ಮೇಲ್ತೆರಿಗೆ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಐಟಿಯಲ್ಲಿ 20ಶತಕೋಟಿ ವಹಿವಾಟು ಗುರಿ: ಯಡಿಯೂರಪ್ಪ