ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು ಒಟ್ಟು 100 ಶತಕೋಟಿ ರೂ. (2.2 ಶತಕೋಟಿ ಡಾಲರ್) ನಷ್ಟ ಎದುರಿಸುತ್ತಿರುವ ಹೊರತಾಗಿಯೂ, ಮುಂದಿನ ಎರಡು ತಿಂಗಳಿನೊಳಗೆ ಯಾನ ದರವನ್ನು ಕಡಿತಗೊಳ್ಳುವ ಸಾಧ್ಯತೆಗಳಿವೆ ಎಂದು ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದು, ಈ ಉದ್ಯಮವನ್ನು ಕಾಡುತ್ತಿರುವ ಬಿಕ್ಕಟ್ಟು ನಿವಾರಣೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
ಮಾರುಕಟ್ಟೆಯ ಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಮಾನ ಯಾನ ದರ ನಿರ್ಧರಿಸಲಾಗುತ್ತದೆ ಎಂದು ಪಟೇಲ್ ಹೇಳಿದ್ದಾರೆ. ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ದೇಶದ ಸರಕಾರಿ ಮತ್ತು ಖಾಸಗಿ ಸ್ವಾಮ್ಯದ ವೈಮಾನಿಕ ಉದ್ಯಮಕ್ಕೆ ಸಹಾಯ ನೀಡುವ ಬಗ್ಗೆ ಅವರು ಪ್ರತಿಪಾದಿಸುತ್ತಲೇ ಬಂದಿದ್ದರು.
ಪ್ರಯಾಣ ದರಗಳು ಬೇಡಿಕೆ ಮತ್ತು ಪೂರೈಕೆಗೆ ಸಂಬಂಧಿಸಿದ್ದಾಗಿದ್ದು, ಎರಡು ತಿಂಗಳೊಳಗೆ ಅವುಗಳು ಇಳಿಕೆಯಾಗಲಿದೆ ಎಂದು ಅವರು ತಿಳಿಸಿದರು. |