ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಚ್ಚಾ ತೈಲ ದರ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲ ದರ ಹೆಚ್ಚಳ
ಚೀನಾ ಸರಕಾರ ಆರ್ಥಿಕ ಕುಸಿತ ನಿಯಂತ್ರಣಕ್ಕೆ 586 ಬಿಲಿಯನ್ ಡಾಲರ್‌ಗಳ ಘೋಷಣೆಯಿಂದಾಗಿ ಏಷ್ಯಾದ ಪ್ರಾದೇಶಿಕ ಶೇರುಪೇಟೆಗಳಲ್ಲಿ ತೈಲ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ತೈಲ ದರಗಳು ಪ್ರತಿ ಬ್ಯಾರೆಲ್‌ಗೆ 64 ಡಾಲರ್‌ಗೆ ಏರಿಕೆಯಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ನವೆಂಬರ್ ತಿಂಗಳ ವಿತರಣೆಯಲ್ಲಿ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 2.87 ಡಾಲರ್‌ ದರ ಏರಿಕೆಯಾಗಿ 63.91 ಡಾಲರ್‌ಗೆ ತಲುಪಿದೆ. ಸಿಂಗಾಪುರ್ ಶೇರುಪೇಟೆಯಲ್ಲಿ ಶುಕ್ರವಾರದಂದು 27 ಸೆಂಟ್‌ಗಳ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 61.04 ಡಾಲರ್‌ಗಳಿಗೆ ಮುಕ್ತಾಯವಾಗಿತ್ತು.

ರವಿವಾರದಂದು ಚೀನಾ ಸರಕಾರ 586 ಬಿಲಿಯನ್ ಡಾಲರ್‌ಗಳ ಪ್ಯಾಕೇಜ್ ಘೋಷಿಸುತ್ತಿದ್ದಂತೆ ಸೋಮವಾರದಂದು ಏಷ್ಯಾದ ಶೇರುಪೇಟೆಗಳು ಏಅರಿಕೆಯನ್ನು ಕಾಣುವಲ್ಲಿ ಸಹಕಾರಿಯಾಯಿತು. ಶಾಂಘೈ ಸೇರುಪೇಟೆ ಶೇ. 5ರಷ್ಟು ಜಪಾನ್ ಮಾರುಕಟ್ಟೆ ಶೇ. 4.9ರಷ್ಟು ಹಾಗೂ ಹಾಂಗ್‌ಕಾಂಗ್‌ ಶೇರುಪೇಟೆ ಶೇ.3.2 ರಷ್ಟು ಏರಿಕೆಯನ್ನು ಕಂಡವು.

ಪ್ರಸ್ತುತ ಜಾಗತಿಕ ಆರ್ಥಿಕ ಕುಸಿತ ನಿಧಾನವಾಗಿ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ತೈಲ ವಹಿವಾಟುದಾರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಹಣದುಬ್ಬರ ಮತ್ತು ದುರ್ಬಲ ಡಾಲರ್‌ ಬೇಡಿಕೆಯಿಂದಾಗಿ ಕಚ್ಚಾ ತೈಲ ದರಗಳಲ್ಲಿ ಕೂಡಾ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೂಡಿಕೆದಾರರು ಭಾವಿಸುತ್ತಾರೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಚ್‌ಎಸ್‌ಬಿಸಿಯಿಂದ ಏಷ್ಯಾದಲ್ಲಿ 600 ಹುದ್ದೆ ಕಡಿತ?
ವಾಹನಗಳ ಮಾರಾಟದಲ್ಲಿ ಶೇ.14.42ರಷ್ಟು ಕುಸಿತ
ಶೇ.7ರಿಂದ 7.5ರಷ್ಟು ಅಭಿವೃದ್ಧಿ: ಪಿಎಂ ವಿಶ್ವಾಸ
ಅಮೇರಿಕಾ: ಇನ್ನೆರಡು ಬ್ಯಾಂಕ್‌ಗಳು ದಿವಾಳಿ
ಎರಡು ತಿಂಗಳಲ್ಲಿ ವಿಮಾನಯಾನ ದರ ಕಡಿತ
ಜೆಟ್: ಕನಿಷ್ಠ 25 ವಿದೇಶೀ ಪೈಲಟ್‌ಗಳು ಮನೆಗೆ