ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪೆಟ್ರೋಲ್ ದರ ಇಳಿಕೆಗೆ ಕಾರಟ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲ್ ದರ ಇಳಿಕೆಗೆ ಕಾರಟ್ ಆಗ್ರಹ
ಪೆಟ್ರೋಲೀಯಂ ದರಗಳನ್ನು ಇಳಿಕೆ ಮಾಡದೇ ಅಬಕಾರಿ ತೆರಿಗೆಯನ್ನು ಕಡಿತಗೊಳಿಸಿ ಕೇಂದ್ರ ಸರಕಾರ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಸಿಪಿಐ(ಎಂ) ಪಾಲಿಟ್‌ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆರೋಪಿಸಿದ್ದಾರೆ.

ಕಚ್ಚಾ ತೈಲದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 170 ಡಾಲರ್‌ಗಳಿದ್ದಾಗ ಜೂನ್ ತಿಂಗಳಲ್ಲಿ ಪೆಟ್ರೋಲ್ ದರವನ್ನು 5 ರೂಪಾಯಿ ಹಾಗೂ ಸಿಲೆಂಡರ್ ಅನಿಲ ದರವನ್ನು 50 ರೂ ಹೆಚ್ಚಳ ಮಾಡಿದ್ದು, ಈಗ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರ 60 ಡಾಲರ್‌ಗೆ ಇಳಿಕೆಯಾದ ನಂತರವೂ ದರವನ್ನು ಇಳಿಕೆ ಮಾಡಿ ಜನಸಾಮಾನ್ಯರಿಗೆ ನೆಮ್ಮದಿ ನೀಡುವ ಬದಲು ಕಿಂಗ್‌ಫಿಶರ್ ಹಾಗೂ ಜೆಟ್‍ ವಿಮಾನ ಸಂಸ್ಥೆಗಳಿಗೆ ಕೇಂದ್ರ ಸರಕಾರ ನೆಮ್ಮದಿ ನೀಡುತ್ತಿದೆ ಎಂದು ಕಾರಟ್ ಆರೋಪಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಮತ್ತು ಪ್ರಧಾನಿ ಮನಮೋಹನ್‌ ಸಿಂಗ್ ಕೈಗಾರಿಕೋದ್ಯಮಿಗಳ ಪ್ರಭಾವಕ್ಕೆ ಒಳಗಾಗಿ ಜನಸಮಾನ್ಯರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಬಂಡವಾಳ ಶಾಹಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬೃಂದಾ ಕಾರಟ್‌ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಚ್ಚಾ ತೈಲ ದರ ಹೆಚ್ಚಳ
ಎಚ್‌ಎಸ್‌ಬಿಸಿಯಿಂದ ಏಷ್ಯಾದಲ್ಲಿ 600 ಹುದ್ದೆ ಕಡಿತ?
ವಾಹನಗಳ ಮಾರಾಟದಲ್ಲಿ ಶೇ.14.42ರಷ್ಟು ಕುಸಿತ
ಶೇ.7ರಿಂದ 7.5ರಷ್ಟು ಅಭಿವೃದ್ಧಿ: ಪಿಎಂ ವಿಶ್ವಾಸ
ಅಮೇರಿಕಾ: ಇನ್ನೆರಡು ಬ್ಯಾಂಕ್‌ಗಳು ದಿವಾಳಿ
ಎರಡು ತಿಂಗಳಲ್ಲಿ ವಿಮಾನಯಾನ ದರ ಕಡಿತ