ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟೆಲಿಕಾಂ: ಟಾಪ್ 10ರಲ್ಲಿ ಸ್ಥಾನಪಡೆದ ಭಾರತೀಯರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಲಿಕಾಂ: ಟಾಪ್ 10ರಲ್ಲಿ ಸ್ಥಾನಪಡೆದ ಭಾರತೀಯರು
ಟಾಟಾ ಕಮ್ಯೂನಿಕೇಶನ್‌ನ ಶ್ರೀನಾಥ್ ಎನ್ ಮತ್ತು ಭಾರ್ತಿ ಎಂಟರ್‌ಪ್ರೈಸೆಸ್‌ನ ಸುನೀಲ್ ಭಾರ್ತಿ ಮಿತ್ತಲ್ ಜಗತ್ತಿನ 100 ಪ್ರಮುಖ ಪ್ರಭಾವಿ ಟೆಲಿಕಾಂ ನಾಯಕರುಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ ಎಂದು ಕೈಗಾರಿಕೋದ್ಯಮದ ಮ್ಯಾಗ್‌ಜಿನ್ ವರದಿ ಮಾಡಿದೆ.

ಟಾಪ್ 10 ಸ್ಥಾನಗಳಲ್ಲಿ ಟಾಟಾ ಕಮ್ಯೂನಿಕೇಶನ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ನರಸಿಂಹನ್ ಎಂಟನೆ ಸ್ಥಾನವನ್ನು ಪಡೆದಿದ್ದಾರೆ ಎಂದು ಗ್ಲೋಬಲ್ ಟೆಲಿಕಾಂ ಬಿಸಿನೆಸ್ ಮ್ಯಾಗ್‌ಜಿನ್ ವರದಿ ಮಾಡಿದೆ.

ಗೂಗಲ್ ಮುಖ್ಯಸ್ಥ ಎರಿಕ್ ಶಿಮ್ಟ್‌ ಜಾಗತಿಕ ಟೆಲಿಕಾಂ ನಾಯಕರುಗಳ ಸಾಲಿನಲ್ಲಿ ಮೊದಲನೇ ಸ್ಥಾನವನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಂತ್ರಿಕತೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಜಾಬ್ಸ್ ಮತ್ತು ಚೀನಾದ ಮಾಹಿತಿ ತಂತ್ರಜ್ಞಾನ ಸಚಿವ ಲೀ ಯೊಹಾಂಗ್ ಕ್ರಮವಾಗಿ ಎರಡನ್ ಹಾಗೂ ಮೂರನೇ ಸ್ಥಾನವನ್ನು ಪಡೆದಿದ್ದಾರೆ ಎಂದು ಮ್ಯಾಗ್‌ಜಿನ್ ಪ್ರಕಟಿಸಿದೆ.

ಭಾರ್ತಿ ಎಂಟರ್‌ಪ್ರೈಸೆಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ 35ನೇ ಸ್ಥಾನವನ್ನು ಪಡೆದಿದ್ದು, ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಕೊಹ್ಲಿ 39ನೇ ಸ್ಥಾನವನ್ನು ಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೆಟ್ರೋಲ್ ದರ ಇಳಿಕೆಗೆ ಕಾರಟ್ ಆಗ್ರಹ
ಕಚ್ಚಾ ತೈಲ ದರ ಹೆಚ್ಚಳ
ಎಚ್‌ಎಸ್‌ಬಿಸಿಯಿಂದ ಏಷ್ಯಾದಲ್ಲಿ 600 ಹುದ್ದೆ ಕಡಿತ?
ವಾಹನಗಳ ಮಾರಾಟದಲ್ಲಿ ಶೇ.14.42ರಷ್ಟು ಕುಸಿತ
ಶೇ.7ರಿಂದ 7.5ರಷ್ಟು ಅಭಿವೃದ್ಧಿ: ಪಿಎಂ ವಿಶ್ವಾಸ
ಅಮೇರಿಕಾ: ಇನ್ನೆರಡು ಬ್ಯಾಂಕ್‌ಗಳು ದಿವಾಳಿ