ದೇಶದ ಆರ್ಥಿಕತೆ ಭದ್ರ ಬುನಾದಿಯ ತಳಹದಿಯ ಮೇಲೆ ಆವರಿಸಿಕೊಂಡಿದ್ದು, ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಸರಕಾರ ಎಲ್ಲ ರೀತಿಯ ಸಹಕಾರಗಳನ್ನು ನೀಡಲು ಸಿದ್ದವಾಗಿದೆ ಎಂದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದಾರೆ.
ಭಾರತ ಬಲಯುತವಾದ ಆರ್ಥಿಕತೆಯನ್ನು ಹೊಂದಿದ್ದರಿಂದ ಅಲ್ಪ ಪ್ರಮಾಣದ ಆರ್ಥಿಕ ಕುಸಿತವನ್ನು ಕಂಡಿದೆ ಆದರೆ ಹೆಚ್ಚಿನ ಕುಸಿತವಾಗಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ಖಾಸಗಿ ಕಂಪೆನಿಗಳನ್ನು ರಕ್ಷಿಸಲು ಸರಕಾರದಿಂದ ಕೆಲ ಸೂಕ್ತ ಕ್ರಮಗಳ ಅಗತ್ಯವಿದೆ ಎನ್ನುವುದನ್ನು ನಾವು ಅರಿತಿದ್ದೇವೆ. ಕಂಪೆನಿಗಳಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ದೇಶದ ಆರ್ಥಿಕತೆಯನ್ನು ಬಲಪಡಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಪೆಟ್ರೋಲ್ ದರ ಸದ್ಯಕ್ಕೆ ಕಡಿತ ಮಾಡುವ ಪ್ರಶ್ನೆ ಉದ್ಬವಿಸುವುದಿಲ್ಲ. ಆದರೆ ಕೈಗಾರಿಕೋದ್ಯಮ ಪೆಟ್ರೋಲ್ ದರ ಇಳಿಸಬೇಕು ಎಂದು ಒತ್ತಾಯಿಸಿದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ. |