ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಶ್ವದ ಟಾಪ್ 10 ಸಾಧಕಿಯರಲ್ಲಿ 'ನೂಯಿ '
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವದ ಟಾಪ್ 10 ಸಾಧಕಿಯರಲ್ಲಿ 'ನೂಯಿ '
ಪೆಪ್ಸಿಕೊ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಸೇರಿದಂತೆ ಮೂವರು ಭಾರತೀಯ ಮಹಿಳೆಯರು ವಾಲ್‌ ಸ್ಟ್ರೀಟ್ ಜರ್ನಲ್‌ ಹೊರಡಿಸಿದ ಜಾಗತಿಕ ಟಾಪ್ 50ರಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಸ್ಕೋ ಕಂಪೆನಿಯ ಮುಖ್ಯ ತಾಂತ್ರಿಕ ಅಧಿಕಾರಿ ಪದ್ಮಶ್ರೀ ವಾರಿಯರ್ , ಐನೆಕ್ಸ್ ಮೀಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾಣಿ ಮುಖರ್ಜಿ ಅವರುಗಳು ಸೇರ್ಪಡೆಯಾಗಿದ್ದಾರೆ ಎಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ತಂಪು ಪಾನೀಯ ತಯಾರಿಕೆ ಸಂಸ್ಥೆಯಾದ ಪೆಪ್ಸಿಕೊ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಟಾಪ್ 10 ರಲ್ಲಿ ಸ್ಥಾನಪಡೆದಿದ್ದು, ವಾರಿಯರ್ ಮತ್ತು ಮುಖರ್ಜಿಯಾ ಕ್ರಮವಾಗಿ 31 ಹಾಗೂ 41ನೇ ಸ್ಥಾನವನ್ನು ಪಡೆದಿದ್ದಾರೆ.

ಫೆಡರಲ್ ಡಿಪಾಜಿಟ್ ಇನ್‌ಸ್ಯೂರೆನ್ಸ್ ಕಾರ್ಪೋರೇಶನ್‌ನ ಮುಖ್ಯಸ್ಥ ಶೈಲಾ ಬೇರ್ ಮೊದಲನೇ ಸ್ಥಾನ ಪಡೆದಿದ್ದು, ಬ್ಯಾಂಕ್ ಆಫ್ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾರ್ಬರಾ ಡೆಸೊರ್‌ಗೆ ಎರಡನೇ ಸ್ಥಾನ ಹಾಗೂ ಮೂರನೇ ಸ್ಥಾನವನ್ನು ಇಂದ್ರಾ ನೂಯಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶದ ಆರ್ಥಿಕತೆ ಸದೃಢವಾಗಿದೆ: ಪ್ರಧಾನಿ
ಟೆಲಿಕಾಂ: ಟಾಪ್ 10ರಲ್ಲಿ ಸ್ಥಾನಪಡೆದ ಭಾರತೀಯರು
ಪೆಟ್ರೋಲ್ ದರ ಇಳಿಕೆಗೆ ಕಾರಟ್ ಆಗ್ರಹ
ಕಚ್ಚಾ ತೈಲ ದರ ಹೆಚ್ಚಳ
ಎಚ್‌ಎಸ್‌ಬಿಸಿಯಿಂದ ಏಷ್ಯಾದಲ್ಲಿ 600 ಹುದ್ದೆ ಕಡಿತ?
ವಾಹನಗಳ ಮಾರಾಟದಲ್ಲಿ ಶೇ.14.42ರಷ್ಟು ಕುಸಿತ