ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂದ್ರಾನೂಯಿಗೆ ಬ್ರಿಡ್ಜ್ ಅವಾರ್ಡ್ ಗರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದ್ರಾನೂಯಿಗೆ ಬ್ರಿಡ್ಜ್ ಅವಾರ್ಡ್ ಗರಿ
ಭಾರತೀಯ ಮೂಲದ ಪೆಪ್ಸಿಕೊ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಇಂದ್ರಾ ನೂಯಿ, ಕರ್ತವ್ಯದಲ್ಲಿ ತೋರಿದ ದಕ್ಷತೆಯಿಂದಾಗಿ ಬ್ರಿಡ್ಜ್ ಅವಾರ್ಡ್‌ಗೆ ಪಾತ್ರರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 4 ರಂದು ನಡೆಯುವ ವಾರ್ಷಿಕ ಸಭೆಯಲ್ಲಿ ನ್ಯಾಷನಲ್ ಬ್ರಿಡ್ಜ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ದೇಶದ ಪ್ರಮುಖ ಕಾರ್ಪೋರೇಟ್ ಕಂಪೆನಿಗಳ ಸಮಿತಿಯ ಸದಸ್ಯರು, ಉದ್ಯಮಿಗಳು ಮತ್ತು ಅಕಾಡೆಮಿಗಳ ಮುಖ್ಯಸ್ಥರು, ಕಂಪೆನಿಯ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಅಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಗೆ ತೋರಿದ ಕರ್ತವ್ಯ ನಿಷ್ಟೆಯಿಂದಾಗಿ ಇಂದ್ರಾ ನೂಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕಾಗೊ ಯುನೈಟೆಡ್ ನ್ಯಾಷನಲ್ ಬ್ರಿಡ್ಜ್ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಹೆಮ್ಮೆಯನಿಸುತ್ತಿದೆ ಎಂದು ಇಂದ್ರಾ ನೂಯಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವದ ಟಾಪ್ 10 ಸಾಧಕಿಯರಲ್ಲಿ 'ನೂಯಿ '
ದೇಶದ ಆರ್ಥಿಕತೆ ಸದೃಢವಾಗಿದೆ: ಪ್ರಧಾನಿ
ಟೆಲಿಕಾಂ: ಟಾಪ್ 10ರಲ್ಲಿ ಸ್ಥಾನಪಡೆದ ಭಾರತೀಯರು
ಪೆಟ್ರೋಲ್ ದರ ಇಳಿಕೆಗೆ ಕಾರಟ್ ಆಗ್ರಹ
ಕಚ್ಚಾ ತೈಲ ದರ ಹೆಚ್ಚಳ
ಎಚ್‌ಎಸ್‌ಬಿಸಿಯಿಂದ ಏಷ್ಯಾದಲ್ಲಿ 600 ಹುದ್ದೆ ಕಡಿತ?