ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗುರಿ ಸಾಧಿಸುವಲ್ಲಿ ವಿಫಲವಾದ ರಫ್ತು ಉದ್ಯಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುರಿ ಸಾಧಿಸುವಲ್ಲಿ ವಿಫಲವಾದ ರಫ್ತು ಉದ್ಯಮ
ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳ ರಫ್ತು ವಹಿವಾಟಿನಲ್ಲಿ ಕುಸಿತ ಕಂಡಿದ್ದು, 200 ಬಿಲಿಯನ್ ಡಾಲರ್‌ಗಳ ರಫ್ತು ವಹಿವಾಟಿನ ಗುರಿ ತಲಪಲು ವಿಫಲವಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಐದು ವರ್ಷಗಳ ರಫ್ತು ವಹಿವಾಟಿನಲ್ಲಿ ಮೊದಲ ಬಾರಿಗೆ ಕುಸಿತ ಕಂಡಿದ್ದು, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಂತೆ ಮುಂಬರುವ ತಿಂಗಳಲ್ಲಿ ಕೂಡಾ ರಫ್ತು ವಹಿವಾಟು ಇಳಿಕೆಯಾದಲ್ಲಿ ವಾರ್ಷಿಕ ರಫ್ತು ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಪ್ರಧಾನ ನಿರ್ದೇಶಕ ಆರ್‌.ಎಸ್ ಗುಜ್ರಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉದ್ಯೋಗಾಧಾರಿತ ಕ್ಷೇತ್ರಗಳಾದ ರತ್ನಗಳು, ಆಭರಣ, ಕರಕುಶಲ , ಜವಳಿ ಮತ್ತು ಚರ್ಮದ ರಫ್ತು ವಹಿವಾಟಿನಲ್ಲಿ ಕುಸಿತ ಕಂಡಿದ್ದರಿಂದ, ಉದ್ಯೋಗಿಗಳಿಗೆ ಭಾರಿ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ಗುಜ್ರಾಲ್ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಎದುರಾದ ಆರ್ಥಿಕ ಕುಸಿತದಿಂದಾಗಿ ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ಆದರೂ ಅಕ್ಟೋಬರ್ 30 ರೊಳಗೆ ರಫ್ತು ವಹಿವಾಟಿನ ಗುರಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೂಯಿಗೆ ಬ್ರಿಡ್ಜ್ ಅವಾರ್ಡ್ ಪ್ರಶಸ್ತಿ
ವಿಶ್ವದ ಟಾಪ್ 10 ಸಾಧಕಿಯರಲ್ಲಿ 'ನೂಯಿ '
ದೇಶದ ಆರ್ಥಿಕತೆ ಸದೃಢವಾಗಿದೆ: ಪ್ರಧಾನಿ
ಟೆಲಿಕಾಂ: ಟಾಪ್ 10ರಲ್ಲಿ ಸ್ಥಾನಪಡೆದ ಭಾರತೀಯರು
ಪೆಟ್ರೋಲ್ ದರ ಇಳಿಕೆಗೆ ಕಾರಟ್ ಆಗ್ರಹ
ಕಚ್ಚಾ ತೈಲ ದರ ಹೆಚ್ಚಳ