ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
ಭಾರತೀಯ ರೈಲ್ವೆ ವಿಭಾಗ ಪ್ರಸಕ್ತ ವರ್ಷದ ಏಪ್ರಿಲ್ 1ರಿಂದ - ಅಕ್ಟೋಬರ್ 31ರ ವರೆಗಿನ ಅವಧಿಯ ಆದಾಯದಲ್ಲಿ ಶೇ.15.76ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ರೈಲ್ವೆ ವಕ್ತಾರರು ಮಾತನಾಡಿ ಕಳೆದ ವರ್ಷ 38,481.83 ಕೋಟಿ ರೂಪಾಯಿಗಳಿದ್ದ ಆದಾಯ, ಪ್ರಸಕ್ತ ವರ್ಷದಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಆದಾಯ 44,547.52 ಕೋಟಿ ರೂ.ಗಳಾಗಿವೆ ಎಂದು ಹೇಳಿದ್ದಾರೆ.

ಸರಕು ಸಾಗಾಣಿಕೆ ಆದಾಯ ಕಳೆದ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್‌ ತಿಂಗಳವರೆಗೆ 25,688.18 ಕೋಟಿ ರೂ.ಗಳಿದ್ದ ಆದಾಯ, ಪ್ರಸಕ್ತ ಏಪ್ರಿಲ್‌ನಿಂದ ಅಕ್ಟೋಬರ್ ತಿಂಗಳವರೆಗೆ 30,151.97 ಕೋಟಿ ರೂಪಾಯಿಗಳಾಗಿದ್ದು, ಶೇ.17.38 ರಷ್ಟಾಗಿದೆ ಎಂದು ತಿಳಿಸಿದ್ದಾರೆ.

2008-09ರ ಆರ್ಥಿಕ ಸಾಲಿನ ವರ್ಷದ ಮೊದಲ ಏಳು ತಿಂಗಳಲ್ಲಿ ಪ್ರಯಾಣಿಕ ಆದಾಯ 12,575.05 ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ 11,160.90 ಕೋಟಿ ರೂ.ಗಳಾಗಿತ್ತು ಎಂದು ರೈಲ್ವೆ ವಕ್ತಾರರು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುರಿ ಸಾಧಿಸುವಲ್ಲಿ ವಿಫಲವಾದ ರಫ್ತು ಉದ್ಯಮ
ಇಂದ್ರಾನೂಯಿಗೆ ಬ್ರಿಡ್ಜ್ ಅವಾರ್ಡ್ ಗರಿ
ವಿಶ್ವದ ಟಾಪ್ 10 ಸಾಧಕಿಯರಲ್ಲಿ 'ನೂಯಿ '
ದೇಶದ ಆರ್ಥಿಕತೆ ಸದೃಢವಾಗಿದೆ: ಪ್ರಧಾನಿ
ಟೆಲಿಕಾಂ: ಟಾಪ್ 10ರಲ್ಲಿ ಸ್ಥಾನಪಡೆದ ಭಾರತೀಯರು
ಪೆಟ್ರೋಲ್ ದರ ಇಳಿಕೆಗೆ ಕಾರಟ್ ಆಗ್ರಹ