ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಥಿರ ಠೇವಣಿಗಳ ಬಡ್ಡಿ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಥಿರ ಠೇವಣಿಗಳ ಬಡ್ಡಿ ದರ ಕಡಿತ
ಮುಂಬರುವ ತಿಂಗಳಿನಿಂದ ಠೇವಣಿ ಬಡ್ಡಿ ದರದಲ್ಲಿ ಶೇ.0.5 ರಷ್ಟು ಕಡಿತ ಮಾಡುವುದಾಗಿ ಕಾರ್ಪೋರೇಶನ್ ಬ್ಯಾಂಕ್ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.0.5 ರಷ್ಟು ಕಡಿತಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಬ್ಯಾಂಕ್‌ನ ನೂತನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೆ.ಎಂ.ಗರ್ಗ್ ತಿಳಿಸಿದ್ದಾರೆ.

ಕಾರ್ಪೋರೇಶನ್ ಬ್ಯಾಂಕ್ ಈಗಾಗಲೇ ಕಳೆದ ವಾರ ಸಾಲದ ಮೇಲೆ ಶೇ.14 ರಷ್ಟಿದ್ದ ಬಡ್ಡಿ ದರದಲ್ಲಿ ಶೇ.0.75 ರಷ್ಟು ಕಡಿತಗೊಳಿಸಿ ಶೇ.13.25ಕ್ಕೆ ನಿಗದಿ ಮಾಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ ಅಂತ್ಯದ ವೇಳೆಗೆ ಬ್ಯಾಂಕ್ 1,05,000 ಕೋಟಿ ರೂ.ಗಳ ವಹಿವಾಟು ನಡೆಸಿದ್ದು, ಮಾರ್ಚ್ 2009ರ ವೇಳೆಗೆ 1,15,000 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ನಿರೀಕ್ಷೆಯಿದೆ ಎಂದು ಗರ್ಗ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಗರೋತ್ತರ ಕಂಪೆನಿಗಳ ಸ್ವಾಧೀನಕ್ಕೆ ಟಾಟಾ ತಡೆ
ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
ಗುರಿ ಸಾಧಿಸುವಲ್ಲಿ ವಿಫಲವಾದ ರಫ್ತು ಉದ್ಯಮ
ಇಂದ್ರಾನೂಯಿಗೆ ಬ್ರಿಡ್ಜ್ ಅವಾರ್ಡ್ ಗರಿ
ವಿಶ್ವದ ಟಾಪ್ 10 ಸಾಧಕಿಯರಲ್ಲಿ 'ನೂಯಿ '
ದೇಶದ ಆರ್ಥಿಕತೆ ಸದೃಢವಾಗಿದೆ: ಪ್ರಧಾನಿ