ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕುಸಿತದಿಂದ ಪ್ರವಾಸೋದ್ಯಮಕ್ಕೆ ಧಕ್ಕೆಯಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕುಸಿತದಿಂದ ಪ್ರವಾಸೋದ್ಯಮಕ್ಕೆ ಧಕ್ಕೆಯಿಲ್ಲ
ಪ್ರಸ್ತುತ ಎದುರಾಗಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟು ದೇಶದ ಪ್ರವಾಸೋದ್ಯಮದ ಮೇಲೆ ಸಂಪೂರ್ಣ ಪರಿಣಾಮ ಬೀರುವುದಿಲ್ಲ ಎಂದಿರುವ ಹಿರಿಯ ಅಧಿಕಾರಿಗಳು, ಐತಿಹಾಸಿಕವಾಗಿ, ಸಾಮಾಜಿಕವಾಗಿ ಖ್ಯಾತಿಯನ್ನು ಪಡೆದಿರುವ ಭಾರತದ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ ಎಂದು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಬಹುದು. ಆದರೆ ಸಂಪೂರ್ಣವಾಗಿ ನಿಲ್ಲುವುದು ಸಾಧ್ಯವಿಲ್ಲ. ಭಾರತದ ಪ್ರವಾಸೋದ್ಯಮ ಉತ್ತಮ ರೀತಿಯಲ್ಲಿ ಮುನ್ನಡೆಯಲಿದೆ ಎನ್ನುವುದಕ್ಕೆ ಹಲವಾರು ಸಕಾರಾತ್ಮಕ ಕಾರಣಗಳಿವೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ಕಾರ್ಯದರ್ಶಿ ಲೀಲಾ ನಂದನ್ ವರ್ಲ್ಡ್ ಟ್ರಾವೆಲ್ ಮಾರ್ಕೆಟ್ ಲಂಡನ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ 2003ರಲ್ಲಿ 2.73 ಮಿಲಿಯನ್‌ಗಳಾಗಿದ್ದು,2007ರಲ್ಲಿ 5.07 ಮಿಲಿಯನ್‌ಗೆ ಏರಿಕೆಯಾಗಿ ದ್ವಿಗುಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಆರಂಭದ ಒಂಬತ್ತು ತಿಂಗಳ ಅವಧಿಯಲ್ಲಿ 3.87 ಮಿಲಿಯನ್ ಅಂತಾರಾಷ್ಟ್ರೀಯ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.10.4 ರಷ್ಟು ಹೆಚ್ಚಳವಾಗಿದೆ ಎಂದು ಪ್ರವಾಸೋದ್ಯಮ ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ 10.7 ಬಿಲಿಯನ್ ಡಾಲರ್‌ ಗಳಿಕೆಯಾಗಿದ್ದು, ಜಗತ್ತಿನ ಪ್ರಮುಖ 20 ದೇಶಗಳಲ್ಲಿ ಪಟ್ಟಿಯಲ್ಲಿ ಭಾರತ ಸ್ಥಾನಪಡೆದಿದೆ. ದೇಶಿಯ ಪ್ರವಾಸಿಗರಲ್ಲಿ 2003ರಲ್ಲಿದ್ದ 309 ಮಿಲಿಯನ್ ಪ್ರವಾಸಿಗರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ 527 ಮಿಲಿಯನ್‌ಗಳಿಗೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಥಿರ ಠೇವಣಿಗಳ ಬಡ್ಡಿ ದರ ಕಡಿತ
ಸಾಗರೋತ್ತರ ಕಂಪೆನಿಗಳ ಸ್ವಾಧೀನಕ್ಕೆ ಟಾಟಾ ತಡೆ
ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
ಗುರಿ ಸಾಧಿಸುವಲ್ಲಿ ವಿಫಲವಾದ ರಫ್ತು ಉದ್ಯಮ
ಇಂದ್ರಾನೂಯಿಗೆ ಬ್ರಿಡ್ಜ್ ಅವಾರ್ಡ್ ಗರಿ
ವಿಶ್ವದ ಟಾಪ್ 10 ಸಾಧಕಿಯರಲ್ಲಿ 'ನೂಯಿ '