ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ: ಪ್ರತಿ ಬ್ಯಾರೆಲ್‌ಗೆ 55 ಡಾಲರ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ: ಪ್ರತಿ ಬ್ಯಾರೆಲ್‌ಗೆ 55 ಡಾಲರ್‌
ಜಾಗತಿಕ ಆರ್ಥಿಕ ಕುಸಿತ ಮುಂದುವರಿದು ಇಂಧನ ಬೇಡಿಕೆ ಕುಸಿಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 55 ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಲಂಡನ್‌‌ನಲ್ಲಿ ಡಿಸೆಂಬರ್ ತಿಂಗಳ ಕಚ್ಚಾ ತೈಲ ವಿತರಣೆ ದರ 4.16 ಡಾಲರ್‌ಗಳ ಇಳಿಕೆಯಾಗಿ ಪ್ರತಿ ಬ್ಯಾರೆಲ್‌‌ಗೆ 54.92 ಡಾಲರ್‌ಗೆ ತಲುಪಿದೆ.

ನ್ಯೂಯಾರ್ಕ್‌ನಲ್ಲಿ ಕಚ್ಚಾ ತೈಲ ದರ 4.09 ಡಾಲರ್‌ಗಳ ಇಳಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 58.32 ಡಾಲರ್‌ಗಳಿಗೆ ತಲುಪಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಆರ್ಥಿಕ ಕುಸಿತದ ಆತಂಕದಿಂದಾಗಿ ಇಂಧನ ಬೇಡಿಕೆ ಅಲ್ಪ ಸಮಯದವರೆಗೆ ಕುಸಿತ ಕಾಣುವ ಸಾಧ್ಯತೆಗಳಿವೆ ಎಂದು ಬಾರ್ಕಲೇಸ್ ಕಂಪೆನಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಕುಸಿತದಿಂದ ಪ್ರವಾಸೋದ್ಯಮಕ್ಕೆ ಧಕ್ಕೆಯಿಲ್ಲ
ಸ್ಥಿರ ಠೇವಣಿಗಳ ಬಡ್ಡಿ ದರ ಕಡಿತ
ಸಾಗರೋತ್ತರ ಕಂಪೆನಿಗಳ ಸ್ವಾಧೀನಕ್ಕೆ ಟಾಟಾ ತಡೆ
ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
ಗುರಿ ಸಾಧಿಸುವಲ್ಲಿ ವಿಫಲವಾದ ರಫ್ತು ಉದ್ಯಮ
ಇಂದ್ರಾನೂಯಿಗೆ ಬ್ರಿಡ್ಜ್ ಅವಾರ್ಡ್ ಗರಿ