ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೆರಿಗೆ ಸಂಗ್ರಹದಲ್ಲಿ ಶೇ.5ರಷ್ಟು ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೆರಿಗೆ ಸಂಗ್ರಹದಲ್ಲಿ ಶೇ.5ರಷ್ಟು ಇಳಿಕೆ
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕೈಗಾರಿಕೋದ್ಯಮದ ಪ್ರಗತಿ ನಿಧಾನಗತಿಯಲ್ಲಿ ಸಾಗಿದ್ದರಿಂದ, ಸರಕಾರದ ಅಬಕಾರಿ ಮತ್ತು ಕಸ್ಟಮ್ಸ್ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಶೇ. 5ರಷ್ಟು ಇಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.

ಕೈಗಾರಿಕೋದ್ಯಮ ಅಗಸ್ಟ್ ತಿಂಗಳಲ್ಲಿ ಶೇ.1.3ರಷ್ಟು ಅಭಿವೃದ್ಧಿ ದರ ಏರಿಕೆಯನ್ನು ಕಂಡಿತ್ತು ನಂತರ ಅಕ್ಟೋಬರ್ ತಿಂಗಳ ರಫ್ತು ವಹಿವಾಟಿನಲ್ಲಿ ಶೇ 15ರಷ್ಟು ಕುಸಿತ ಕಂಡು ಭಾರಿ ಹಿನ್ನಡೆ ಅನುಭವಿಸಿದ್ದರಿಂದ ಅಬಕಾರಿ ಮತ್ತು ಕಸ್ಟಮ್ಸ್‌ ತೆರಿಗೆ ಸಂಗ್ರಹ ಇಳಿಕೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಅಬಕಾರಿ ಮತ್ತು ಕಸ್ಟಮ್ಸ್ ತೆರಿಗೆಯಲ್ಲಿ 19,646 ಕೋಟಿ ರೂ.ಗಳ ಸಂಗ್ರಹವಾಗಿತ್ತು. ಆದರೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ 18,664 ಕೋಟಿ ರೂ.ಗಳ ಸಂಗ್ರಹವಾಗಿ ಶೇ. 5 ರಷ್ಟು ತೆರಿಗೆ ಸಂಗ್ರಹ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಅನುದಾನ ಹಾಗೂ ಅಭಿವೃದ್ಧಿ ಪರ ಯೋಜನೆಗಳಿಂದಾಗಿ ವೆಚ್ಚದಲ್ಲಿ ಏರಿಕೆಯಾಗುತ್ತಿದ್ದು, ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗುತ್ತಿರುವುದರಿಂದ ಸರಕಾರ ಕೆಲ ನಿಯಮಗಳಲ್ಲಿ ಬದಲಾವಣೆ ತರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ: ಪ್ರತಿ ಬ್ಯಾರೆಲ್‌ಗೆ 55 ಡಾಲರ್‌
ಆರ್ಥಿಕ ಕುಸಿತದಿಂದ ಪ್ರವಾಸೋದ್ಯಮಕ್ಕೆ ಧಕ್ಕೆಯಿಲ್ಲ
ಸ್ಥಿರ ಠೇವಣಿಗಳ ಬಡ್ಡಿ ದರ ಕಡಿತ
ಸಾಗರೋತ್ತರ ಕಂಪೆನಿಗಳ ಸ್ವಾಧೀನಕ್ಕೆ ಟಾಟಾ ತಡೆ
ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
ಗುರಿ ಸಾಧಿಸುವಲ್ಲಿ ವಿಫಲವಾದ ರಫ್ತು ಉದ್ಯಮ