ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂಧನ ತೆರಿಗೆ ರದ್ದು: ಏರ್‌ಏಷ್ಯಾ ಸಂಸ್ಥೆಯ ಸಾಧನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಧನ ತೆರಿಗೆ ರದ್ದು: ಏರ್‌ಏಷ್ಯಾ ಸಂಸ್ಥೆಯ ಸಾಧನೆ
ಏಷ್ಯಾದಲ್ಲಿ ಪ್ರಮುಖ ಖಾಸಗಿ ಬೃಹತ್ ವಿಮಾನಯಾನ ಸಂಸ್ಥೆಯಾದ ಏರ್‌ಏಷ್ಯಾ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಹಾರಾಟ ಸೌಲಭ್ಯವನ್ನು ಒದಗಿಸುತ್ತಿದ್ದು , ಅಂತಾರಾಷ್ಟ್ರೀಯ ಹಾಗೂ ದೇಶಿಯ ಹಾರಾಟಗಳ ಮೇಲೆ ಇಂಧನ ತೆರಿಗೆಯನ್ನು ರದ್ದುಪಡಿಸಿದ ಜಗತ್ತಿನ ಮೊದಲ ವಿಮಾನಯಾನ ಸಂಸ್ಥೆ ಖ್ಯಾತಿಗೆ ಒಳಪಟ್ಟಿದೆ.

ಏರ್‌ ಏಷ್ಯಾ ಸಂಸ್ಥೆ ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ಸುಲಭವಾಗಿ ದೊರೆಯುವ ಕಡಿಮೆ ದರದಲ್ಲಿ ಸೇವೆಯನ್ನು ನೀಡುವಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಇಂದಿನಿಂದಲೇ ಪ್ರಯಾಣಿಕರು ಏರ್‌ಏಷ್ಯಾ ಮತ್ತು ಏರ್‌ಏಷ್ಯಾ ಎಕ್ಸ್‌ಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಡಿಮೆ ಟಿಕೆಟ್ ದರ, ವಿಮಾನನಿಲ್ದಾಣ ತೆರಿಗೆ ಮತ್ತು ಅಡಳಿತಾತ್ಮಕ ಶುಲ್ಕ ಮಾತ್ರ ಪಾವತಿಸಬೇಕಾಗುತ್ತದೆ.

ಏರ್ಏಷ್ಯಾ ಪ್ರಾದೇಶಿಕ ಪ್ರಚಾರ ಕಾರ್ಯವನ್ನು ಆರಂಭಿಸುತ್ತಿದ್ದು, ಏಷ್ಯಾದ ವೈಮಾನಿಕ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನದಲ್ಲಿರಲು 5 ಲಕ್ಷ ಉಚಿತ ಸೀಟುಗಳನ್ನು ನೀಡುವುದಾಗಿ ವಿಶೇಷ ಘೋಷಣೆ ಮಾಡಿದೆ. 22 ಜೂನ್‌ನಿಂದ 24 ಅಕ್ಟೋಬರ್ ತಿಂಗಳ ಅವಧಿಯಲ್ಲಿ ತಲಪುದಾಣಗಳಿಗೆ ಪ್ರಯಾಣಿಸಲು ಬಯಸುವ ಅತಿಥಿ ಪ್ರಯಾಣಿಕರು ತಮ್ಮ ಸೀಟುಗಳನ್ನು ನವೆಂಬರ್ 12 ರಿಂದ 16ರವರೆಗೆ ರಿಸರ್ವ್ ಮಾಡಬಹುದಾಗಿದೆ.

ಅನೇಕ ವಿಮಾನಯಾನ ಸಂಸ್ಥೆಗಳು ಇಂಧನ ದರ ಹೆಚ್ಚಳದಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಿವೆ. ಆದರೆ ಏರ್‌ಏಷ್ಯಾ ವಿಮಾನಯಾನ ಸಂಸ್ಥೆ ಇಂಧನ ದರ ಹೆಚ್ಚಳದ ಮಧ್ಯೆಯು ಪ್ರಯಾಣಿಕರಿಗೆ ಕಡಿಮೆ ದರಗಳಲ್ಲಿ ಪ್ರಯಾಣಿಸುವ ಸೌಲಭ್ಯ ನೀಡುತ್ತಿದೆ.ಏರ್‌ಏಷ್ಯಾ ವೈಮಾನಿಕ ಸಂಸ್ಥೆ ಏಷ್ಯಾದಾದ್ಯಂತ ಪ್ರಯಾಣಿಸುವ ಪ್ರಯಾಣಿಕರಿಗೆ ಇಂಧನ ತೆರಿಗೆಯನ್ನು ರದ್ದುಪಡಿಸಿದ ಜಗತ್ತಿನ ಏಕೈಕ ವಿಮಾನಯಾನ ಸಂಸ್ಥೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೆರಿಗೆ ಸಂಗ್ರಹದಲ್ಲಿ ಶೇ.5ರಷ್ಟು ಇಳಿಕೆ
ತೈಲ: ಪ್ರತಿ ಬ್ಯಾರೆಲ್‌ಗೆ 55 ಡಾಲರ್‌
ಆರ್ಥಿಕ ಕುಸಿತದಿಂದ ಪ್ರವಾಸೋದ್ಯಮಕ್ಕೆ ಧಕ್ಕೆಯಿಲ್ಲ
ಸ್ಥಿರ ಠೇವಣಿಗಳ ಬಡ್ಡಿ ದರ ಕಡಿತ
ಸಾಗರೋತ್ತರ ಕಂಪೆನಿಗಳ ಸ್ವಾಧೀನಕ್ಕೆ ಟಾಟಾ ತಡೆ
ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ